ಎಂ.ಕಾಂ ಪರೀಕ್ಷೆ: ಬಾಳಿಗಾ ಕಾಲೇಜು 92.30 ಫಲಿತಾಂಶ

ಕುಮಟಾ: 2018-19 ನೇ ಶೈಕ್ಷಣಿಕ ವರ್ಷದ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಎಂ.ಕಾಂ. 1ನೇ ಸೆಮಿಸ್ಟರಿನ ಫಲಿತಾಂಶ 92.30 ಬಂದಿದ್ದು ಪರೀಕ್ಷೆಗೆ ಕುಳಿತ ಒಟ್ಟೂ 39 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ತೇರ್ಗಡೆಯಾದ ವಿದ್ಯಾರ್ಥಿಗಳಲ್ಲಿ 02 ವಿದ್ಯಾರ್ಥಿಗಳು ಶೇ. 70ಕ್ಕಿಂತ ಅಧಿಕ, 20 ವಿದ್ಯಾರ್ಥಿಗಳು ಶೇ. 60ಕ್ಕಿಂತ ಅಧಿಕ ಹಾಗೂ 14 ವಿದ್ಯಾರ್ಥಿಗಳು ಶೇ. 50ಕ್ಕಿಂತ ಅಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ಕಾಲೇಜಿನ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಕ್ರಮವಾಗಿ ಸ್ವಾತಿ ಸತೀಶ ಭಟ್ಟ ಶೇ. 73.40 (500ಕ್ಕೆ 367), ಮಮತಾ ಗಣೇಶ ಉಪಾಧ್ಯಾಯ 70.80 (500ಕ್ಕೆ 354) ಹಾಗೂ ಸ್ವಾತಿ ಸತೀಶ ಭಟ್ಟ ಶೇ. 67.40 (500ಕ್ಕೆ 337) ಪಡೆದಿರುತ್ತಾರೆ. ಉತ್ತಮ ಫಲಿತಾಂಶವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದ ಎಲ್ಲ ವಿದ್ಯಾರ್ಥಿಗಳನ್ನು ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.