ಯಲ್ಲಾಪುರದ ಅಂಬೇಡ್ಕರ್ ಸರ್ಕಲ್ ಬಳಿ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ

ಯಲ್ಲಾಪುರ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಅಂಬೇಡ್ಕರ್ ಸೇವಾ ಸಂಘದ ಆಶ್ರಯದಲ್ಲಿ ರವಿವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128 ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ಪಾಟಣಕರ್, ಪ್ರಮುಖರಾದ ಮಾರುತಿ ಬೋವಿವಡ್ಡರ್, ಅಶೋಕ ಕೊರವರ್, ಗಣೇಶ ಪಾಟಣಕರ್, ರವಿ ಪಾಟಣಕರ್, ಗಣೇಶ ಪಾಟಣಕರ್, ಮಹಾದೇವ ಬೋವಿವಡ್ಡರ್, ಅನಿಲ ಜೋಗಳೆಕರ್, ಯಲ್ಲಪ್ಪ ಬೆನಕಟ್ಟಿ, ರೂಪಾ ಪಾಟಣಕರ್ ಮುಂತಾದವರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.