ಸವಿಯಲು ಟೇಸ್ಟಿಯಾಗಿರುತ್ತೆ ಹೆಸರು ಕಾಳು ಮಸಾಲಾ ರೆಸಿಪಿ


ಅಡುಗೆ ಮನೆ: ಹೆಸರು ಕಾಳು ಮಸಾಲೆಯು ನಮ್ಮ ದೇಶದಲ್ಲಿ ಭಾರೀ ಜನಪ್ರಿಯವಾಗಿರುವ ರೆಸಿಪಿಯಾಗಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಇದನ್ನು ರಾಗಿ ಮುದ್ದೆಯ ಜೊತೆಗೆ ಹೆಸರು ಕಾಳು ಮಸಾಲೆ ಮಾಡಿಕೊಂಡು ತಿನ್ನಲು ಸಹ ಜನ ಇಷ್ಟಪಡುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ಹಸಿರು ಮೂಂಗ್ ದಾಲ್ ಎಂದು ಕರೆಯುತ್ತಾರೆ.

ನಿಮಗೆ ಬೇಕಾದ ಪದಾರ್ಥಗಳು: ಹೆಸರು ಕಾಳು – 1 ಕಪ್, ಕತ್ತರಿಸಿದಂತಹುದ ಟೊಮೇಟೊ – 1 ಈರುಳ್ಳಿ -2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀ. ಚಮಚ, ಬೆಳ್ಳುಳ್ಳಿ -6-7 ತುಂಡು, ಹಸಿಮೆಣಸಿನ ಕಾಯಿ- 3-4, ಲವಂಗ – 3, ಖಾರದ ಪುಡಿ – 1 ಟೀ.ಚಮಚ, ಅರಿಶಿಣ ಪುಡಿ – 1 ಟೀ.ಚಮಚ, ಎಣ್ಣೆ – 3-4 ಟೀ. ಚಮಚ, ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಹೆಸರು ಕಾಳುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ ಮತ್ತು 2-3 ವಿಷಲ್ ಬರುವವರೆಗು ಕುಕ್ಕರಿನಲ್ಲಿ ಬೇಯಿಸಿ. ತವಾ ತೆಗೆದುಕೊಳ್ಳಿ, ಮತ್ತು ಅದರಲ್ಲಿ ಎಣ್ಣೆಯನ್ನು ಹಾಕಿ. ಇದಕ್ಕೆ ಲವಂಗವನ್ನು ಹಾಕಿ, ಹುರಿಯಿರಿ. ಇದನ್ನು ಹುರಿಯುವಾಗ ಸುವಾಸನೆಯ ಪರಿಮಳ ಬರಬೇಕು. ಈಗ ಇದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನ ಕಾಯಿಗಳನ್ನು ಹಾಕಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಡಿ. ನಂತರ ಇದಕ್ಕೆ ಟೊಮೇಟೊ ಹಾಕಿ,5 ನಿಮಿಷಗಳ ಕಾಲ ಬೇಯಿಸಿ.

ನಂತರ, ಇದಕ್ಕೆ ಬೇಯಿಸಿದ ಹೆಸರು ಕಾಳುಗಳನ್ನು ಹಾಕಿ. ಖಾರದ ಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹೆಸರು ಕಾಳು ದಾಲ್ ಮಾಡಲು ನೀವು ನೀರನ್ನು ಸರಿಯಾಗಿ ಹಾಕಬೇಕಾಗುತ್ತದೆ. ಹಾಗಾಗಿ 3 ಕಪ್ ನೀರನ್ನು ಈ ಮಿಶ್ರಣಕ್ಕೆ ಹಾಕಿ. ಅತ್ತ ನೀರು ಅಲ್ಲದ-ಇತ್ತ ಗಟ್ಟಿಯು ಅಲ್ಲದ ಗ್ರೇವಿಯಾಗುವವರೆಗೆ ಇದನ್ನು ಬೇಯಿಸಿ. ಈಗ ನಿಮ್ಮ ಮುಂದೆ ಖಾರವಾಗಿರುವ ಹೆಸರು ಕಾಳು ಮಸಾಲೆಯು ತಯಾರಾಗಿದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಅಲಂಕಾರಕ್ಕೆಂದು ಹಾಕಿ.

Categories: ಅಡುಗೆ ಮನೆ

Leave A Reply

Your email address will not be published.