ಗೋಕರ್ಣದಲ್ಲಿ ‘ರಂಗನಾಯಕಿ’ ಧಾರವಾಹಿಯ ಚಿತ್ರೀಕರಣ


ಗೋಕರ್ಣ: ಕಲರ್ಸ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ರಾತ್ರಿ 8.30ಕ್ಕೆ ಪ್ರಸಾರವಾಗುವ ರಂಗನಾಯಕಿ ಧಾರವಾಹಿ ಪ್ರಸಾರ ವಾಗಲಿದ್ದು, ಇದರ ಚಿತ್ರೀಕರಣ ಈ ಭಾಗದಲ್ಲಿ ಚಿತ್ರೀಕರಿಸಿದ್ದು, ವಿಶೇಷವಾಗಿದೆ.

ಕಳೆದ ತಿಂಗಳು 20 ದಿನಗಳಿಗಿಂತ ಹೆಚ್ಚು ಕಾಲ ಇಲ್ಲಿ ಮಹಾಗಣಪತಿ ದೇವಾಲಯದ ಪಕ್ಕದಲ್ಲಿರುವ ಅನಂತ ವೇದೇಶ್ವರ ಮನೆಯಲ್ಲಿ ಚಿತ್ರೀಕರಣ ನಡೆದಿತ್ತು, ನಿರ್ದೇಶಕ ಕೆ.ರಾಮ್ ಜಿ. ಸಹ ನಿರ್ದೇಶಕ ಮನು ರಾಮಯ್ಯ, ನಿರ್ಮಾಮಪಕಿ ವಿಮಲಾ ಸಹಯೋಗದಲ್ಲಿ ಬರುತ್ತಿರುವ ಧಾರವಾಹಿಯ ರಂಗನಾಯಕಿಯಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಕಿರುತೆರೆಯ ನಟ ಪವನ ಮೃದು ಸ್ವಭಾವದ ಹುಡುಗ ಚಿರಂತನಾಗಿ, ನಟಿ ಪ್ರೇರಣಾ ಹುಡುಗಾಟದ ಹುಡುಗಿ ಬಂಗಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಲಾವಿದರಾಗಿ ನಾಗರಾಜ್, ಚಂದ್ರಕಲಾ ದೇವಿರಿ ಲಕ್ಷ್ಮಣ, ಗಣೇಶ ಗಾಮದ ಯಲ್ಲಾಪುರ, ಬಾಬು, ಕೃಷ್ಣ, ರಾಷ್ಟ್ರೀಯ ದೇಹದಾಢ್ರ್ಯ ಮತ್ತು ಕಬ್ಬಡಿ ಆಟಗಾರ ಜಿಮ್ ಚೇತು, ಸಹಕಲಾವಿದರಾಗಿ ಗೋಕರ್ಣದ ಸ್ಥಳೀಯರು ನಟಿಸಿರುವುದು ಕುತೂಹಲ ಮೂಡಿಸಿದೆ. ಕಥೆಯಲ್ಲಿ ಬಂಗಾರಿ ಗೋಕರ್ಣದವಾಳಾಗಿದ್ದು, ಇವರ ಮನೆಯಲ್ಲಿ ನಾಲ್ಕು ಜನ, ಮತ್ತು ನಾಯಕ ಚಿರಂತನ ಮನೆಯಲ್ಲಿ ಹನ್ನೊಂದು ಜನರೊಂದಿಗೆ ಬರುತ್ತಿರುವ ಧಾರವಾಹಿಯಲ್ಲಿ ಮಹಾಬಲೇಶ್ವರ ದೇವಾಲಯ, ರಥಬೀದಿ, ಮಿರ್ಜಾನ ಕೋಟೆ ಸೇರಿದಂತೆ ಪ್ರಮುಖ ಸ್ಥಳದಲ್ಲಿ ಚಿತ್ರೀಕರಿಸಿರುವುದರಿಂದ ಈ ಭಾಗದ ಜನರು ವೀಕ್ಷಿಸಲು ಕಾತುರದಿಂದಿದ್ದಾರೆ.

Categories: ಸಿನಿ-ಕ್ರೀಡೆ

Leave A Reply

Your email address will not be published.