ಖರ್ಜೂರದ ಬಿಸ್ಕತ್‌ ತಿಂದು ಬಾಯಿ ಸಿಹಿ ಮಾಡಿಕೊಳ್ಳಿ


ಅಡುಗೆ ಮನೆ: ವೀಕೆಂಡ್ ಬಂತು ಅಂದ್ರೆ ಏನಾನರೂ ಹೊಸ ಬಗೆಯ ತಿಂಡಿ ಮಾಡಿ ತಿನ್ನಬೇಕೆನಿಸುತ್ತೆ, ಹಾಗಿದ್ರೆ ಮನೆಯಲ್ಲಿಯೇ ಮಾಡಿ ಸವಿಯಿರಿ ಸಿಯಾದ ಖರ್ಜೂರದ ಬಿಸ್ಕತ್

ಬೇಕಾಗುವ ಪದಾರ್ಥಗಳು: ಮೈದಾಹಿಟ್ಟು- 1 ಕಪ್, ಹಸಿ ಖರ್ಜೂರದ ತಿರುಳು- 1 ಕಪ್, ಹಾಲು- ಸ್ವಲ್ಪ, ಗೋಡಂಬಿ ತರಿ- 4 ಚಮಚ, ಸಕ್ಕರೆ ಪುಡಿ- 75ಗ್ರಾಂ, ಬೇಕಿಂಗ್ ಪೌಡರ್- 1 ಚಮಚ.

ತಯಾರಿಸುವ ವಿಧಾನ: ಮೈದಾಹಿಟ್ಟು, ಬೇಕಿಂಗ್ ಪೌಡರ್ ಸೇರಿಸಿ ಜರಡಿ ಹಿಡಿದು ಸಕ್ಕರೆ ಪುಡಿ, ಹಾಲು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ಫ್ರಿಜ್ ನಲ್ಲಿಡಿ. ನಂತರ ಹಿಟ್ಟನ್ನು ಹೊರ ತೆಗೆದು ಅರ್ಧ ಸೆಂ.ಮೀ. ದಪ್ಪ ಇರುವಂತೆ 2 ಚಪಾತಿ ಲಟ್ಟಿಸಿಕೊಳ್ಳಿ. ಹಸಿ ಖರ್ಜೂರವನ್ನು ಸಣ್ಣ ಸಣ್ಣ ಚೂರು ಮಾಡಿಕೊಂಡು ಗೋಡಂಬಿ ತರಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಒಂದು ಲಟ್ಟಿಸಿದ ಚಪಾತಿಯ ಮೇಲೆ ಖರ್ಜೂರ, ಗೋಡಂಬಿ ಮಿಶ್ರಣವನ್ನು ಹರಡಿ.

ಇನ್ನೊಂದು ಚಪಾತಿ ಮೇಲಿಟ್ಟು ಹಗುರವಾಗಿ ಲಟ್ಟಿಸಿ. 1 ಬಾಕ್ಸ್ ಮುಚ್ಚಳದಲ್ಲಿ ಒಂದೇ ಅಳತೆಯಲ್ಲಿ ಬಿಲ್ಲೆಗಳನ್ನು ಕೊರೆದು ಬೇಕಿಂಗ್ ತಟ್ಟೆಗೆ ತುಪ್ಪ ಸವರಿ ಬಿಲ್ಲೆಗಳನ್ನು ಜೋಡಿಸಿ. ಓವನ್ ನಲ್ಲಿ 15 ನಿಮಿಷ ಬೇಯಿಸಿ. ಈಗ ರುಚಿಕರ ಖರ್ಜೂರದ ಬಿಸ್ಕತ್ ಸವಿಯಲು ರೆಡಿ.

Categories: ಅಡುಗೆ ಮನೆ

Leave A Reply

Your email address will not be published.