ಸುವಿಚಾರ

ಧನ್ಯಾಸ್ತೇ ಯೇ ನ ಪಶ್ಯಂತಿ ದೇಶಭಂಗಂ ಕುಲಕ್ಷಯಮ್
ಪರಚಿತ್ತಗತಾನ್ ದಾರಾನ್ ಪುತ್ರಂ ಚ ವ್ಯಸನಾತುತಮ್ ||

ತನ್ನದೆಂದು ಆದರಿಸಿಕೊಂಡು ಬಂದ ರಾಷ್ಟ್ರದ (ದೇಶದ) ಹೋಳಾಗುವಿಕೆಯನ್ನೂ (ಛಿದ್ರಗೊಳ್ಳುವಿಕೆಯನ್ನೂ), ತನ್ನ ಕುಲದ ನಾಶವನ್ನೂ, ಇನ್ನೊಬ್ಬನ ಮನಸಿಗೆ ಸೇರಿಕೊಂಡಿರುವ ತನ್ನ ಹೆಂಡತಿಯನ್ನೂ, ದುಶ್ವಟಗಳಿಗೆ ದಾಸನಾದ ಮಗನನ್ನೂ ಯಾರು ಕಾಣುವುದಿಲ್ಲವೋ ಅವರ ಬದುಕೇ ಧನ್ಯ. ಈ ಮೇಲಿನ ಅನರ್ಥಗಳಲ್ಲಿ ಒಂದಾದರೂ ಅನರ್ಥ ಘಟಿಸಿದಲ್ಲಿ ಆ ಮನುಷ್ಯನ ಬಾಳುವೆ ಕಷ್ಟಕರವಾಗುತ್ತದೆ. ತನ್ನದಾದ ವಸ್ತು, ವ್ಯಕ್ತಿ ಅಥವಾ ಸಂಗತಿಗಳು ತನ್ನ ಕಣ್ಣಮುಂದೆಯೇ ನಾಶವಾಗುವ ದುರಂತವು ವೇದನಾಪೂರ್ಣವಾದ್ದು. ರಾಷ್ಟ್ರ, ಕುಲ, ತನ್ನ ಹೆಂಡತಿ ಮತ್ತು ಮಗ ಅನ್ನುವ ಸಂಗತಿಗಳು ಮನುಷ್ಯನು ಅತ್ಯಂಚ ಅಚ್ಚಟೆಯಿಂದ ಕಟ್ಟಿಕೊಳ್ಳುವ ಅಥವಾ ಆತುಕೊಳ್ಳುವಂಥವಾಗಿವೆ. ಅವುಗಳ ಹಾನಿಯನ್ನು ನೋಡುವ ಸಂದರ್ಭ ಯಾರಿಗೂ ಬರಬಾರದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.