ಶಿರಸಿಯಲ್ಲಿ ಮಾ.28ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಇಲ್ಲಿನ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ಮಾ. 28 ಗುರುವಾರ ದಂದು ತುರ್ತು ನಿರ್ವಹಣೆ ಕಾರ್ಯವನ್ನು ಹಾಗೂ ವಿವಿಧ ಮಾರ್ಗಗಳ ಲಿಂಕ್ ಲೈನ್ ಹಾಗೂ ತಂತಿ ಬದಲಾವಣೆ ಕಾಮಗಾರಿಗಳನ್ನು ಹಮ್ಮಿಕೊಂಡಿದೆ.

ಕಾರಣ ಶಿರಸಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮತ್ತು ಗ್ರಾಮೀಣ ಮಾರ್ಗಗಳಾದ ಶಿರಸಿ ನಗರ-1, ಶಿರಸಿ ನಗರ-2, ಕಸ್ತೂರಬಾನಗರ, ಕೆಂಗ್ರೆ, ಮಾರಿಗದ್ದೆ, ತಾರಗೋಡ, ಚಿಪಿಗಿ, ಸಾಲ್ಕಣಿ, ಸಂಪಖಂಡ, ದೇವನಳ್ಳಿ, ಹುಲೇಕಲ್ ಮತ್ತು ಬನವಾಸಿ 11 ಕೆ.ವಿ ಮಾರ್ಗಗಳಲ್ಲಿ ಅಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಕೆ.ಪಿ.ಟಿ.ಸಿ.ಎಲ್ ಶಿರಸಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.