ಮಾ.28ಕ್ಕೆ ಮಹಾಸತಿ ದೇವಸ್ಥಾನದ ವರ್ಧಂತ್ಯುತ್ಸವ

ಕುಮಟಾ: ತಾಲೂಕಿನ ಕತಗಾಲ ಸಮೀಪದ ಸಾಗಡಿಬೇಣದಲ್ಲಿರುವ ಮಹಾಸತಿ ದೇವಸ್ಥಾನದ ದ್ವಾದಶಮಾನ ವರ್ಧಂತ್ಯುತ್ಸವದ ಅಂಗವಾಗಿ ಮಾ. 28 ರಂದು ದೇವಸ್ಥಾನದ ಆವರಣದಲ್ಲಿ ಕರ್ಮ-ಭಕ್ತಿ-ಜ್ಞಾನ ಸಮಾರಾಧನೆಯನ ಜೊತೆಗೆ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಯೋಜಕ ಗಜಾನನ ಗಂಗು ಗೌಡ ತಿಳಿಸಿದ್ದಾರೆ.

ಬೆಳಿಗ್ಗೆ 11 ಗಂಟೆಯಿಂದ ಉಪ್ಪಿನಪಟ್ಟಣದ ವಿನಾಯಕ ಭಟ್ಟರ ನೇತೃತ್ವದಲ್ಲಿ 108 ಸಾಮೂಹಿಕ ಸತ್ಯನಾರಾಯಣ ಪೂಜೆ. ಸಂಜೆ 6 ಗಂಟೆಯಿಂದ ವಿವಿಧ ಮಂಡಳಿಯವರಿಂದ ಭಜನಾ ಕಾರ್ಯಕ್ರಮ. ಸಂಜೆ 8 ಕ್ಕೆ ವಿದುಷಿ ಸೌಮ್ಯಾ ಭಟ್ಟ ಇವರ ಮಾರ್ಗದರ್ಶನದಲ್ಲಿ, ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಹಾಗು ಸಿಂಡಿಕೇಟ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ, ಗೋಕರ್ಣದ ಮೈತ್ರೇಯೀ ನೃತ್ಯ ಕಲಾ ಟ್ರಸ್ಟ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರತಿಭಾ ಪ್ರದರ್ಶನ ಹಾಗೂ ರಾತ್ರಿ 9 ಗಂಟೆಯಿಂದ ಕುಮಟಾ ಅಭಿಜಿತ್ ಉದಯ ಗೌಡ ಇವರಿಂದ ನಾಟ್ಯ ಪ್ರತಿಭೆ ಅನಾವರಣಗೊಳ್ಳಲಿದೆ.

ಸನ್ಮಾನ ಸಮಾರಂಭ: ರಾತ್ರಿ 9 ಗಂಟೆಗೆ ಪದ್ಮಶ್ರಿ ಪುರಸ್ಕøತ ಸುಕ್ರಿ ಬೊಮ್ಮು ಗೌಡ, ಅಧ್ಯಾತ್ಮ ಚಿಂತಕ ಹಾಗೂ ಕೃಷಿಕ ಬಾಬು ಮಂಜುನಾಥ ಬೋಗಾರ ಕೊಡಂಬಳೆ, ನಿವೃತ್ತ ಸೈನಿಕ ಶ್ರೀಧರ ಅಂಬಿಗ, ಉಪ್ಪಿನಪಟ್ಟಣ, ರಾಷ್ಟ್ರಮಟ್ಟದ ಯುವ ವೇದಸಾಧಕ ಘನಪಾಠಿ ಯಾದವೇಶ ಶರ್ಮಾ, ಸಾಂತೂರು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅತಿಥಿಗಳಾಗಿ ರೋಟರಿ ಕ್ಲಬ್‍ನ ಅಸಿಸ್ಟಂಟ್ ಗವರ್ನರ್ ವಿನಾಯಕ ಬಾಳೇರಿ ಕುಮಟಾ, ಅಳಕೋಡ ಗ್ರಾಮ ಪಂಚಾಯತ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ, ಎಸ್‍ಕೆಪಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಶಾಂತಪ್ಪ ಕೊರವರ ಹಾಗೂ ವಿಶೇಷ ಆಮಂತ್ರಿತರಾಗಿ ಡಾ. ಗಣಪತಿ ಭಟ್ಟ, ಎಚ್ ಎನ್ ಅಂಬಿಗ, ಗೋಪಾಲಕೃಷ್ಣ ಭಟ್ಟ ಆಗಮಿಸಲಿದ್ದಾರೆ.

ಯಕ್ಷಗಾನ: ರಾತ್ರಿ 11 ಗಂಟೆಯಿಂದ ಕೆಡಿಸಿಸಿ ಬ್ಯಾಂಕ್ ಪ್ರಾಯೊಜಕತ್ವದಲ್ಲಿ ಜಿ. ಕೆ ನಾಯ್ಕರ ಸಂಯೋಜಕತ್ವದಲ್ಲಿ ಬರ್ಗಿಯ ಮಹಾಲಿಂಗೇಶ್ವರ ಮಹಿಷಾಸುರ ಮರ್ದಿನಿ ಯಕ್ಷಗಾನ ಮಂಡಳಿಯ ಸದಸ್ಯರಿಂದ ಸುಭದ್ರಾ ರಾಯಭಾರ ಯಕ್ಷಗಾನ ಜರುಗಲಿದೆ ಎಂದು ತಿಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.