ಮತಗಟ್ಟೆ ಪರಿಶೀಲಿಸಿದ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್

ಗೋಕರ್ಣ: ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೇಲ್ಹೋಟ್ ರವಿವಾರ ಭೇಟಿ ನೀಡಿ ಮತದಾನ ನಡೆಯುವ ಮತಗಟ್ಟೆಗಳ ಪರಿಶೀಲನೆ ಕೈಗೊಂಡರು.

ಗೋಕರ್ಣ ಹೋಬಳಿ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಅಲ್ಲಿ ಇರುವ ಮೂಲಭೂತ ವ್ಯವಸ್ಥೆಯ ಕುರಿತು ಖುದ್ದು ಪರೀಶಿಲನೆ ಕೈಗೊಂಡರು. ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮತಗಟ್ಟೆಯ ವಿವರ ಪಡೆದು ಅಲ್ಲಿ ಅಗತ್ಯವಿರುವ ವ್ಯವಸ್ಥೆಯ ಕುರಿತು ಚರ್ಚಿಸಿ ಸೂಕ್ತ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.