ಬೆಂಕಿ ತಗುಲಿ ಹೊತ್ತಿ ಉರಿದ ಕೊಟ್ಟಿಗೆ: ಮೂರು ಜಾನುವಾರು ಬಲಿ


ಶಿರಸಿ: ಅರಣ್ಯಕ್ಕೆ ಬಿದ್ದ ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಕಾಡು ಸುಟ್ಟು ಭಸ್ಮವಾದರೆ ಅದೇ ಬೆಂಕಿ ಕೊಟ್ಟಿಗೆಗೆ ಆವರಿಸಿ ಮೂರು ಜಾನುವಾರುಗಳನ್ನು ಬಲಿ ಪಡೆದ ಹೃದಯ ವಿದ್ರಾಹಕ ಘಟನೆ ತಾಲೂಕಿನ ಉಂಚಳ್ಳಿಯಲ್ಲಿ ನಡೆದಿದೆ.

ಉಂಚಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಗಣಪೆಜಡ್ಡಿಯಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ನೂರಾರು ಎಕರೆ ಅರಣ್ಯ ಸುಟ್ಟು ಬೂದಿಯಾಗಿದೆ. ಅರಣ್ಯಕ್ಕೆ ಬೆಂಕಿ ಬಿದಿರುವುದನ್ನು ಗಮನಿಸಿದ ಸ್ಥಳಿಯರು ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಅತ್ತ ಕಾಡಿನ ಬೆಂಕಿ ಆರಿಸುತ್ತಿರುವಾಗ ಇತ್ತ ಉಂಚಳ್ಳಿಯ ರಾಮಚಂದ್ರ ಶೆಟ್ಟಿ ಎನ್ನುವವರ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಪರಿಣಾಮ ಮೂರು ಹಸುಗಳು ಕೊಟ್ಟಿಗೆಯಲ್ಲಿಯೇ ಸಾವನ್ನಪ್ಪಿವೆ.

2 ಲಕ್ಷ ಹಾನಿ: ಕೊಟ್ಟಿಗೆ ಹಾಗೂ ಭತ್ತದ ಹುಲ್ಲು ಸಂಪೂರ್ಣ ಸುಟ್ಟಿದ್ದು, ಸುಮಾರು 2 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಹೊತ್ತಿ ಉರಿಯುವುದನ್ನು ಗಮನಿಸಿದ ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ಆರಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಇದೇ ವೇಳೆ ಕೊಟ್ಟಿಗೆ ಸಂಪೂರ್ಣ ಸುಟ್ಟ ಕಾರಣ ಸರಿಯಾದ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.