ಪೊಲೀಸರ ಕಾರ್ಯಾಚರಣೆ: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರು


ಗೋಕರ್ಣ: ವಿದೇಶಿ ಪ್ರವಾಸಿಗರು ವೀಸಾ ಅವಧಿ ಮುಗಿದರು ಅಕ್ರಮವಾಗಿ ಇಲ್ಲೇ ವಾಸಿಸುತ್ತಿರುವದರಿಂದ ಜಿಲ್ಲಾ ಪೊಲೀಸ ಇಲಾಖೆ ಎರಡು ದಿನಗಳಿಂದ ವಿಶೇಷ ಕಾರ್ಯಾಚರಣೆ ಕೈಕೊಂಡಿದ್ದು, ವಿದೇಶಿಗರ ವೀಸಾ ಪಾಸಪೋರ್ಟ ಸೇರಿ ಎಲ್ಲಾ ದಾಖಲೆಗಳು, ವಸ್ತುಗಳನ್ನು ತಪಾಸಣೆ ಕೈಗೊಂಡಿದೆ.

ಅಕ್ರಮ ವಿದೇಶಿಗರ ಪತ್ತೆ ಹೆಚ್ಚಾಗುತ್ತಿದ್ದಂತೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯವರು ಹಿರಿಯ ಅಧಿಕಾರಿ ನೇತೃತ್ವದಲ್ಲಿ 18 ಸದಸ್ಯರ ವಿಶೇಷ ತಂಡ ರಚಿಸಿದೆ. ಇತ್ತೀಚಿಗೆ ರಷ್ಯಾದ ಪ್ರವಾಸಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ವಾಸವಾಗಿರುವುದು ಪತ್ತೆಯಾಗಿರುವುದರಿಂದ ಜಿಲ್ಲಾಡಳಿತ ಸಮಗ್ರ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ.

ಗೋಕರ್ಣದಲ್ಲಿ ಒಟ್ಟು 320 ವಿದೇಶಿಗರು ವಾಸವಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಇವರ ದಾಖಲೆ ಪರಿಶೀಲನೆ ನಡೆದಿದೆ. ಕುಮಟಾ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸಐ ಸಂತೋಷಕುಮಾರ, ಜಿಲ್ಲಾ ವಿಶೇಷ ದಳದ ಪಿಎಸ್‍ಐ ಶ್ರೀಧರ, ಕುಮಟಾ ಪಿಎಸ್‍ಐ ಹನುಮಂತ ಬಿರಾದಾರ, ಸಿಬ್ಬಂದಿ ಸಿದ್ದಪ್ಪ, ಶಿವಾನಂದ ಗೌಡ, ಅನಿಲ ಮಾದರ ಕಾರ್ಯಾಚರಣೆಯಲ್ಲಿ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.