ಲೋಕಸಭಾ ಚುನಾವಣೆ: ಸಹಾಯವಾಣಿ ಕೇಂದ್ರ ಕಾರ್ಯಾರಂಭ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 12-ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ರ ಪ್ರಯುಕ್ತ 77-ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಿನದ 24 ಗಂಟೆ ಕಾರ್ಯನಿರ್ವಹಿಸಲು ಕಾರವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಮ್ ಹಾಗೂ ಸಹಾಯವಾಣಿ ಕೇಂದ್ರವನ್ನು ತರೆಯಲಾಗಿದೆ.

ಕೇಂದ್ರದ ದೂರವಾಣಿ ಸಂಖ್ಯೆ 08382-226366 ಆಗಿದ್ದು, ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರನ್ನು ನೀಡಲು ಹಾಗೂ ಮಾಹಿತಿ ಪಡೆಯಲು ಕರೆ ಮಾಡಬಹುದಾಗಿರುತ್ತದೆ ಎಂದು ಕಾರವಾರ ಸಹಾಯಕ ಕಮೀಷನರ್ ಹಾಗೂ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.