ರುಚಿ-ರುಚಿಯಾದ ಉದ್ದಿನ ವಡೆ ಸವಿದು ನೋಡಿ.


ಅಡುಗೆ ಮನೆ: ಸಾಂಬಾರ್, ಚಟ್ನಿಯ ಜೊತೆಯಲ್ಲಿ ಉದ್ದಿನ ವಡೆ ತಿನ್ನಲು ಬಲು ರುಚಿಯಾಗಿರುತ್ತದೆ. ಹಾಗಿದ್ರೆ ಇನ್ನೇಕೆ ತಡ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- ಅರ್ಧ ಕೆ.ಜಿ., ತೆಂಗಿನ ಕಾಯಿ ತುರಿ- 2 ಹಿಡಿ, ಅಕ್ಕಿಹಿಟ್ಟು- 1 ಬಟ್ಟಲು, ಶುಂಠಿ- 1 ಚೂರು, ಹಸಿ ಮೆಣಸಿನಕಾಯಿ- 10, ಕೊತ್ತಂಬರಿ ಸೊಪ್ಪು- ಅರ್ಧ ಕಟ್ಟು, ಕರಿಬೇವು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಮೆಣಸು ಕಾಳು- 8, ಅಡಿಗೆ ಸೋಡಾ- ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಕ್ಲೀನ್ ಮಾಡಿದ ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿರಿ. ಸುಮಾರು 3 ತಾಸು ನೆನೆದ ನಂತರ, ನೀರನ್ನು ಬಸಿಯಿರಿ, ಉದ್ದಿನ ಬೇಳೆಗೆ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಹಿಟ್ಟಿಗೆ ಕುಟ್ಟಿ ಪುಡಿ ಮಾಡಿದ ಮೆಣಸಿನ ಕಾಳು, ಸಣ್ಣಗೆ ಹೆಚ್ಚಿಕೊಂಡ ತೆಂಗಿನ ಕಾಯಿ, ಹಸಿ ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಹಸಿ ಮೆಣಸಿನ ಕಾಯಿ ಹಾಕಿ ಕಲೆಸಿಕೊಳ್ಳಿರಿ.

ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ. ಎಣ್ಣೆ ಕಾದ ನಂತರ ಒಂದು ಎಲೆಯಲ್ಲಿ ಹಿಟ್ಟು ಹಾಕಿ, ತಟ್ಟಿ ಮಧ್ಯಭಾಗದಲ್ಲಿ ತೂತು ಮಾಡಿ, ಒಂದೊಂದೇ ವಡೆಯನ್ನು ಎಣ್ಣೆಯಲ್ಲಿ ನಿಧಾನವಾಗಿ ಬಿಡಿ. ಕೆಂಪಗೆ ಆದ ನಂತರ ಜಾಲರಿಯಿಂದ ತೆಗೆಯಿರಿ. ಚಟ್ನಿ, ಸಾಂಬಾರ್ ಜೊತೆಗೆ ತಿನ್ನಿರಿ.

Categories: ಅಡುಗೆ ಮನೆ

Leave A Reply

Your email address will not be published.