ಸುವಿಚಾರ

ಅರ್ಥಾಹರಣಕೌಶಲ್ಯಂ ಕಿಂ ಸ್ತುಮಃ ಶಾಸ್ತ್ರವಾದಿನಾಮ್
ಅವ್ಯಯೇಭ್ಯೋಪಿ ಯೇ ಚಾರ್ಥಾನ್ನಿಷ್ಕರ್ಷಂತಿ ಸಹಸ್ರಶಃ ||

ಅರ್ಥೈಸುವಿಕೆಯ ಕೌಶಲ ಅಂತ ಶಾಸ್ತ್ರಜ್ಞರಲ್ಲಿ ಇರುತ್ತದಲ್ಲ ಅದನ್ನು ಹೊಗಳಿದಷ್ಟೂ ಸಾಲದು. ಯಾವುದೇ ವಾಕ್ಯವಿದ್ದರೂ ಯಥಾಯೋಗ್ಯವಾದ ಮತ್ತು ಸ್ವೀಕಾರಾರ್ಹವಾದ ಅರ್ಥವನ್ನವರು ತಂದು ಸೇರಿಸಬಲ್ಲರು. ಅವ್ಯಯಗಳೆಂದ ಭಾಷಾಪ್ರವಿಭಾಗದಿಂದಲೂ ಹತ್ತಾರು ಬಗೆಯ ಅರ್ಥಗಳನ್ನವರು ಹೆಕ್ಕಿ ತರಬಲ್ಲವರಾಗಿರುತ್ತಾರೆ.

ಅವ್ಯಯ ಅನ್ನುವುದಕ್ಕಿಲ್ಲಿ ಹಣವನ್ನು ವ್ಯಯ ಮಾಡದ ಜಿಪುಣ ಎಂಬರ್ಥವೂ ಇದೆ. ಜಿಪುಣನಿಂದಲೂ ಸಾವಿರಾರು ಅರ್ಥವನ್ನು (ಹಣವನ್ನು) ತರಬಲ್ಲವರಾಗಿರುತ್ತಾರೆ ಈ ಶಾಸ್ತ್ರಜ್ಞರು, ಅಂದರೆ ಮಾತಿನ ಕಲೆಯನ್ನರಿತವರು ಎಂಥ ದುಸ್ಸಾಧ್ಯ ಕಾರ್ಯವನ್ನೂ ಸಾಧ್ಯವಾಗಿಸಬಲ್ಲರು ಎಂದರ್ಥ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.