ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿದರೆ ಕಠಿಣ ಕ್ರಮ: ಸಿ.ಪಿ.ಐ ಬಿ. ಗಿರೀಶ


ಶಿರಸಿ: ಹೋಳಿ ಹಬ್ಬದಂದು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯುಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು ಅಂದು ಯಾರಾದರೂ ಹೋಳಿ ಆಡುವವರು ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿದರೆ ಅವರ ಮೇಲೆ ಕಠಿಣ ಕಾನೂನು ಕ್ರಮ ಕ್ಥಗೊಳ್ಳಲಾಗುವುದು ಎಂದು ಶಿರಸಿ ವೃತ್ತ ನಿರೀಕ್ಷಕ ಬಿ. ಗಿರೀಶ ಎಚ್ಚರಿಸಿದ್ದಾರೆ.

ಮಾ. 21ರಂದು ಹೋಳಿ ಹಬ್ಬ ನಡೆಯಲಿದ್ದು ಅಂದಿನಿಂದಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರಾರಂಭಗೊಳ್ಳಲಿದೆ. ಆದ ಕಾರಣ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಬಣ್ಣ ಎರೆಚುವುದಾಗಲೀ ಅಥವಾ ಪರೀಕ್ಷೆಗೆ ಅಡ್ಡಿಪಡಿಸುವುದನ್ನು ಮಾಡಿದಲ್ಲಿ ಯಾವುದೇ ನಿರ್ದಾಕ್ಷಿಣ್ಯವಿಲ್ಲದೇ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿ.ಪಿ.ಐ. ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.