ಶಿರಸಿಯ ಜ್ಞಾನ ಸ್ಟಡಿ ಸರ್ಕಲ್‌ಗೆ ದೆಹಲಿಯ ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆಯಿಂದ ಮಾನ್ಯತೆ

ಶಿರಸಿ: ವೃತ್ತಿನಿರತ ಸನ್ನದು ಲೆಕ್ಕಪರಿಶೋಧಕರು, ವಿದ್ಯಾರ್ಥಿಗಳು ಮತ್ತು ಕರ ಸಲಹೆಗಾರರಿಗೆ ಉಪಯುಕ್ತವಾದ ಕಳೆದ ಒಂದು ವರ್ಷದಿಂದ ಮಾಹಿತಿ ನೀಡುತ್ತಿರುವ ಇಲ್ಲಿನ
ಜ್ಞಾನ ಸ್ಟಡಿ ಸರ್ಕಲ್ಗೆ ದೆಹಲಿಯ ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆಯ ಅಧಿಕೃತ ಮಾನ್ಯತೆ ದೊರೆತಿದೆ. ಅದೀಗ ಶಿರಸಿಯ ಸಿಪಿಇ ಸ್ಟಡಿ ಚಾಪ್ಟರ್ ಆಗಿ ಮುಂದುವರೆಯಲಿದೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಪಿಇ ಸ್ಟಡಿ ಚಾಪ್ಟರ್ನಅ ಸಂಚಾಲಕ, ಲೆಕ್ಕಪರಿಶೋಧಕ ಸುಬ್ರಹ್ಮಣ್ಯ ಜಿ.ಹೆಗಡೆ ಮುಂತಾದವರು ಈ ಕುರಿತು ಮಾಹಿತಿ ನೀಡಿ, ಜ್ಞಾನ ಸ್ಟಡಿ ಸರ್ಕಲ್‌ಗೆ ಅಧಿಕೃತ ಮಾನ್ಯತೆ ಪಡೆದ ನಂತರ ಸಿಪಿಇ ಸ್ಟಡಿ ಚಾಪ್ಟರ್ ಆಗಿ ಮುಂದುವರೆಯಲಿದ್ದು ಮಾ.೧೮ರಂದು ನಗರದ ಟಿಎಂಎಸ್ ಹಾಲ್ನತಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿದೆ. ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಪನ್ನಾರಾಜ ಎಸ್ ಉದ್ಘಾಟಿಸುವರು. ಪ್ರಮುಖರಾದ ಮಧುಕರ ಎನ್.ಹಿರೇಗಂಗೆ, ಶಿವರಾಮ ಭಟ್ಟ, ಕೆ.ವಿ.ದೇಶಪಾಂಡೆ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಲೆಕ್ಕಪರಿಶೋಧನೆ, ಬ್ಯಾಂಕುಗಳ ಶಾಖೆಗಳ ಲೆಕ್ಕಪರಿಶೋಧನೆ ವಿಷಯಗಳ ಕುರಿತು ಕಾಯಾಗಾರ ಸಹ ನಡೆಯಲಿದೆ. ಜಿಲ್ಲೆಯ ವೃತ್ತಿನಿರತ ಲೆಕ್ಕಪರಿಶೋಧಕರಲ್ಲದೇ ಇತರ ಜಿಲ್ಲೆಗಳಿಂದಲೂ ಲೆಕ್ಕಪರಿಶೋಧಕರು, ವಿದ್ಯಾರ್ಥಿಗಳು ಭಾಗವಹಿಸುವರು ಎಂದು ತಿಳಿಸಿದರು.

ಹಿಂದೆ ಲೆಕ್ಕ ಪರಿಶೋಧನೆ ಅಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಿತ್ತು. ಅದೀಗ ಹೆಚ್ಚಿದೆ. ಶಿರಸಿಯಲ್ಲಿಯೇ ೨೨ಕ್ಕೂ ಹೆಚ್ಚು ಮಂದಿ ಇದ್ದಾರೆ. ಅದೇ ರೀತಿ ಈ ಭಾಗದಿಂದ ಬೆಂಗಳೂರಿನಂತಹ ನಗರಕ್ಕೆ ಹೋಗಿ ಲೆಕ್ಕಪರಿಶೋಧನೆಯಂತ ವೃತ್ತಿಯಲ್ಲಿ ತೊಡಗಿರುವ ೩೫೦ಕ್ಕೂ ಹೆಚ್ಚು ಮಂದಿ ತೊಡಗಿದ್ದಾರೆ. ಹೊರ ಊರುಗಳಿಗೆ ಹೋಗಿ ನೆಲೆಸಿ ಉದ್ಯೋಗ ಮಾಡುವುದಕ್ಕಿಂತ ತಮ್ಮೂರಿನಲ್ಲಿಯೇ ಇದ್ದು ಲೆಕ್ಕಪರಿಶೋಧನೆಯಂತಹ ವೃತ್ತಿ ಕೈಗೊಳ್ಳುವುದಕ್ಕೆ ಈ ಕೇಂದ್ರ ಸಹಕಾರಿಯಾಗಲಿವೆ. ಲೆಕ್ಕಪರಿಶೋಧನೆಯ ಜ್ಞಾನ ಪಡೆದರೆ ಆಸ್ಟೇಲಿಯಾ ದೇಶದಂತಹ ಲೆಕ್ಕ ಪರಿಶೋಧನೆಯನ್ನೂ ತಮ್ಮೂರಿನಲ್ಲೇ ಇದ್ದು ಕೈಗೊಳ್ಳಬಹುದು. ಇದರಿಂದ ಸ್ಥಳೀಯವಾಗಿ ಉದ್ಯೋಗ ದೊರಕಿಸಬಹುದು. ಈ ಕಾರ್ಯ ಸಹ ನಗರದಲ್ಲಿ ಕೆಲವರಿಂದ ನಡೆಯುತ್ತಿದೆ ಎಂದು ವಿವರಿಸಿದರು.

ಲೆಕ್ಕಪರಿಶೋಧಕ ಉದಯ ಸ್ವಾದಿ, ವೇಣುಗೋಪಾಲ ಹೆಗಡೆ, ವಿನಯ ಹೆಗಡೆ ಉಪಸ್ಥಿತರಿದ್ದರು

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.