ಯುಗಾದಿ ಉತ್ಸವ ಪೂರ್ವಭಾವಿ ಸಭೆ: ಅದ್ದೂರಿ ಆಚರಣೆಗೆ ತೀರ್ಮಾನ


ಶಿರಸಿ: ಯುಗಾದಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ 21ನೇ ವರ್ಷದ ಯುಗಾದಿ ಉತ್ಸವಾಚರಣೆಗೆ ಅದ್ಧೂರಿ ತಯಾರಿ ನಡೆಸಲಾಗಿದೆ.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಗಾದಿ ಉತ್ಸವ ಸಮಿತಿ ಪೂರ್ವಭಾವಿ ಸಭೆಯಲ್ಲಿ ಈ ಬಾರಿಯ ಯುಗಾದಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು‌.

ಉತ್ಸವ ಸಮಿತಿ ಪ್ರಮುಖ ಗಣಪತಿ ನಾಯ್ಕ ಮಾತನಾಡಿ, ಕಳೆದ 20 ವರ್ಷದಿಂದ ಶಿರಸಿಯಲ್ಲಿ ಅದ್ಧೂರಿ ಯುಗಾದಿ ಉತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಕೂಡ ವಿಶೇಷವಾಗಿ ಆಚರಣೆ ಮಾಡಲು ಉತ್ಸವ ಸಮಿತಿ ನಿರ್ಣಯಿಸಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪೂರ್ವಭಾವಿ ಸಿದ್ಧತೆ ನಡೆಸಲಾಗಿದೆ ಎಂದರು.

ನೂತನ ಸಮಿತಿ ಆಯ್ಕೆ: ಯುಗಾದಿ ಆಚರಣೆ ಹಿನ್ನೆಲೆಯಲ್ಲಿ ಉತ್ಸವ ಸಮಿತಿ ನೂತನ ಗೌರವಾಧ್ಯಕ್ಷರಾಗಿ ಉಪೇಂದ್ರ ಪೈ, ಅಧ್ಯಕ್ಷರಾಗಿ ಕೃಷ್ಣ ಕೊಡಿಯಾ, ಸಂಚಾಲಕರಾಗಿ ಗೋಪಾಲ ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ಸಾಲೇರ, ಖಜಾಂಚಿಯಾಗಿ ಸುನೀಲ ಗರಡಿ, ಉಪಾಧ್ಯಕ್ಷರಾಗಿ ಮೋಹನ್ ಲಾಲ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸವಿತಾ ಐತಾಳ್ ಆಯ್ಕೆ ಮಾಡಲಾಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.