ಕರ್ಮ- ಪುನರ್ಜನ್ಮದ ವಿಷಯದ ಹೆಚ್ಚಿನ ಚರ್ಚೆ ನಡೆಯಬೇಕು: ಪ್ರೊ. ಪದ್ಮಾಶೇಖರ


ಗೋಕರ್ಣ: ಸಂಸ್ಕೃತ ಜ್ಞಾನದ ಖನಿ ದರ್ಶನ, ಉಪನಿಷತ್ತುಗಳು ಮೋಕ್ಷ ಮತ್ತು ಪುನರ್ಜನ್ಮದ ಬಗ್ಗೆ ಸಾರಿ ಹೇಳುತ್ತವೆ. ಅಲ್ಲದೆ ಜೈನ ಮತ್ತು ಬೌದ್ಧ ದರ್ಶನಗಳೂ ಸಹ ಕರ್ಮ ಮತ್ತು ಪುನರ್ಜನ್ಮವನ್ನು ಒಪ್ಪುತ್ತವೆ. ಇಂತಹ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು ಎಂದು ಕರ್ನಾಟಕ ಸಂಸ್ಕೃತ ಮಾಹಾವಿದ್ಯಾಲಯದ ಕುಲಪತಿಗಳಾದ ಪ್ರೊ. ಪದ್ಮಾಶೇಖರ ಹೇಳಿದರು.

ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ (ರಿ)ಶಿರಸಿ ಇವರ ಸಹಯೋಗದಲ್ಲಿ ಇಲ್ಲಿನ ಮೇಧಾದಕ್ಷಿಣಾಮೂರ್ತಿ ವೇದ ಭವನ ಸಂಸ್ಕೃತ ಕಾಲೇಜಿನಲ್ಲಿ ಆಯೋಜಿಸಿರು ಆತ್ಮಸಾಕ್ಷಾತ್ಕಾರ ಎಂಬ ವಿಷಯದ ಬಗೆಗಿನ ಅಂತರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಇಂತಹ ವಿಷಯಗಳ ಪುಸ್ತಕ ರೂಪದಲ್ಲಿ ವಿಶ್ವವಿದ್ಯಾಲಯ ಪ್ರಸಾರರಂದದಿಂದ ಪ್ರಕಾಶಿಸಲಾಗುವುದು ಎಂದು ಭರವಸೆ ನೀಡಿದರು. ವಿಶ್ವವಿದ್ಯಾಲಾಯದ ಹಣಕಾಸು ಅಧಿಕಾರಿಗಳಾದ ಡಾ. ಪ್ರಕಾಶ ಪಾಗೋಜಿ ಮಾತನಾಡಿ ಜೀವನದಲ್ಲಿ ಸಂತೋಷವೇ ಪ್ರಧಾನ, ಆದರೆ ಮೋಕ್ಷ ಪ್ರಾಪ್ತಿ ಧರ್ಮದಿಂದ ಮಾತ್ರ ಸಾಧ್ಯ ಹಾಗಾಗಿ ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಜಿ.ಎನ್. ಭಟ್ ಯುವ ವಿದ್ವಾಂಸರು ಮತ್ತು ಹಿರಿಯ ವಿದ್ವಾಂಸರು ಸೇರಿ ಅಧ್ಯಯನ ಮತ್ತು ಅನುಸಂಧಾನವನ್ನು ದೃಡಗೊಳಿಸಬೇಕು ಇದಕ್ಕಾಗಿಯೇ ಇಂತಹ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದರು. ಪ್ರಾಚಾರ್ಯ ಡಾ. ಕೆ.ವಿ.ಜೋಶಿ ಸ್ವಾಗತಿಸಿದರು. ಡಾ. ಎಮ್.ಜಿ.ಹೆಗಡೆ ವಂದಿಸಿದರು. ಕಾರ್ಯಕ್ರಮವನ್ನು ಕೆ.ಎಲ್. ರಾಘವ ನಿರ್ವಹಿಸಿದರು. ಮೊದಲ ದಿನ ವಿವಿಧ ಸತ್ರಗಳಿ ೧೧ ವಿದ್ವಾಂಸರ ಪ್ರಬಂಧ ಮಂಡನೆಯಾದವು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.