ಅಬಕಾರಿ ಅಧಿಕಾರಿಗಳಿಂದ ಅಕ್ರಮ‌ ಮದ್ಯಗಳ ಬರ್ಜರಿ ಬೇಟೆ

ಕಾರವಾರ:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸಾಗಾಟದ ಮೇಲೆ ನಿಗಾ ಇಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ದಾಳಿ‌ ನಡೆಸಿ ಒಟ್ಟು 27.09 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ ಪಡಿಸಿಕೊಂಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೊನ್ನಾವರ ತಾಲೂಕಿನ ಮಾವಿನಗುಂಡಿ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆಯ ವೇಳೆ 12 ಲೀ. ಅಕ್ರಮ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಅಂಕೋಲಾದಲ್ಲಿ 18 ಲೀ. ಗೋವಾ ಫೆನ್ನಿಯನ್ನು ವಶಕ್ಕೆ ಪಡೆದು ಒಬ್ಬಆರೋಪಿಯನ್ನು ಬಂಧಿಸಲಾಗಿದೆ. ದಾಂಡೇಲಿ ವ್ಯಾಪ್ತಿಯಲ್ಲಿ 21 ಲೀ. ಅಕ್ರಮ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ. ಹೊನ್ನಾವರದ ಕಾವೂರು ಅರಣ್ಯ ವ್ಯಾಪ್ತಿಯಲ್ಲಿ ಗೇರುಹಣ್ಣಿನ ಅಕ್ರಮ ಕಳ್ಳಭಟ್ಟಿ ತಯಾರಿಕೆಯ ಸ್ಥಳಕ್ಕೆ ದಾಳಿ ನಡೆಸಿ 220 ಲೀ. ವಶಪಡಿಸಿಕೊಂಡಿದ್ದಾರೆ.

ಈ ನಾಲ್ಕು ಪ್ರಕರಣಗಳಲ್ಲಿ ವಾಹನ ಹಾಗೂ ಅಕ್ರಮ ಮದ್ಯ ಸೇರಿ ಒಟ್ಟೂ 12,61,800 ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಹೊನ್ನಾವರದ ಕಟ್ಟಡವೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಲೇಬಲ್ ಹೊಂದಿರದ ಹಾಗೂ ಬಾರ್‍ಕೋಡ್ ರೀಡ್ ಆಗದ ಸುಮಾರು 14.48 ಲಕ್ಷ ರೂ. ಮೌಲ್ಯದ 1150 ಬಾಕ್ಸ್‌ ಗಳಲ್ಲಿನ 9064 ಲೀ. ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟೂ ಜಿಲ್ಲೆಯಲ್ಲಿ 5 ಪ್ರಕರಣಗಳಲ್ಲಿ 27.09 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ ತಿಳಿಸಿದ್ದಾರೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.