ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಎಡನೀರು ಮಠದ ಶ್ರೀಗಳಿಂದ ಸಂಗೀತ ಕಾರ್ಯಕ್ರಮ


ಕುಮಟಾ: ಪಟ್ಟಣದ ದೇವರ ಹಕ್ಕಲಿನಲಿನ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಐದನೇ ದಿನದ ಅಂಗವಾಗಿ ಎಡನೀರು ಮಠದ ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಯಿತು.

ಸ್ವಾಮೀಜಿಗಳು ದೇವಿಯ ಹಾಗೂ ತಮ್ಮ ಇಷ್ಟದೇವ ಶ್ರೀ ಗೋಪಾಲಕೃಷ್ಣ ದೇವರ ಸ್ವರಚಿತ ಭಕ್ತಿ ಭಾವಗೀತೆಗಳನ್ನು ಹಾಗೂ ದಾಸರ ಪದಗಳನ್ನು ಹಾಡಿದರು. ಎನ್.ಎಸ್.ಪ್ರಸಾದ್ ಮೆಂಡೋಲಿನ್, ಕೃಷ್ಣ ಉಡುಪ ಕೀಬೋರ್ಡ, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಮೃದಂಗ ಹಾಗೂ ವಿನೋದ ಶ್ಯಾಮ್ ತಬಲಾದಲ್ಲಿ ತಮ್ಮ ಪ್ರಾವಿಣ್ಯತೆ ಮೆರೆದರು. ಬೆಂಗಳೂರಿನಿಂದ ಆಗಮಿಸಿದ ಕಲಾವಿದೆ ಎಲ್.ಕೆ.ವಾಸವಿ ಭರತನಾಟ್ಯ ಪ್ರದರ್ಶಿಸಿದಳು.

ಪ್ರಾರಂಭದಲ್ಲಿ ಪುಣೆಯ ಎಸ್.ಕೆ.ನಾಯಕ ಶ್ರೀಗಳಿಗೆ ಮಾಲಾರ್ಪಣೆಗೈದರು. ಆಡಳಿತ ಮಂಡಳಿಯ ಪರವಾಗಿ ಮೊಕ್ತೇಸರ ಕೃಷ್ಣ ಬಾಬಾ ಪೈ, ಎಂ.ಬಿ.ಪೈ, ಅರ್ಚಕರು, ಪುರೋಹಿತರು, ಕಾರ್ಮಿಕ ಇಲಾಖೆಯ ಉಪ ಆಯುಕ್ತರಾದ ಶ್ರೀಕಂಠಬಾಬು, ವಿದ್ವಾಂಸ ಪಂಜ ಭಾಸ್ಕರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜುನಾಥ ನಾಯ್ಕ, ಈಶ್ವರ ಭಟ್ಟ, ಎನ್.ಆರ್.ಗಜು, ಅರುಣ ಮಣಕೀಕರ, ಕಿರಣ ಪ್ರಭು ನಿರ್ವಹಣೆ, ಪರಿಚಯ, ನಿರೂಪಣೆ, ಪ್ರಕಟಣೆ ಕಾರ್ಯದಲ್ಲಿ ನೆರವಾದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.