ಮಾ. 17 ಕ್ಕೆ ಜಲವಳ್ಳಿ, ಹುಡಗೋಡ ಅವರಿಗೆ ಶೃದ್ಧಾಂಜಲಿ ಸಭೆ

ಕುಮಟಾ: ತಾಲೂಕಿನ ಗುಡೇಅಂಗಡಿ ಮಾದರಿ ರಸ್ತೆಯ ಶ್ರೀ ಮಕರಜ್ಯೋತಿ ಯಕ್ಷಗಾನ ಮಂಡಳಿಯು ಇತ್ತೀಚೆಗೆ ನಿಧನರಾದ ಹೆಸರಾಂತ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕಟೇಶ್ ರಾವ್ ಹಾಗೂ ಹುಡಗೋಡ ಚಂದ್ರಹಾಸ ನಾಯ್ಕ ಅವರ ಗೌರವಾರ್ಥ ಶೃದ್ಧಾಂಜಲಿ ಸಭೆಯನ್ನು ಮಾ. 17 ರಂದು ಮಧ್ಯಾಹ್ನ 4.30ಕ್ಕೆ ಸನ್ನಿಧಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ಆತ್ಮಕ್ಕೆ ಶಾಂತಿ ಕೋರಬೇಕೆಂದು ಮಂಡಳಿಯ ಸಂಚಾಲಕ ರವಿ ನಾಯ್ಕ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.