ಮಾ.16ರಿಂದ ನಾಟಿ ಪಶುವೈದ್ಯ ಪದ್ಧತಿ ತರಬೇತಿ ಕಾರ್ಯಾಗಾರ

ಶಿರಸಿ: ಧಾನ್ ಫೌಂಡೇಶನ್ ಸಂಸ್ಥೆಯ ವತಿಯಿಂದ ನಬಾರ್ಡ್ ಕಾರವಾರ ಇವರ ಸಹಯೋಗದಲ್ಲಿ ನಾಟಿ ಪಶುವೈದ್ಯ ಪದ್ಧತಿಯ ಗ್ರಾಮ ಮಟ್ಟದ ತರಬೇತಿ ಕಾರ್ಯಾಗಾರವನ್ನು ವಿವಿಧ ಗ್ರಾಮಗಳಲ್ಲಿ ಮಾ.16 ರಿಂದ ಮಾ.17ರ ವರೆಗೆ ಆಯೋಜಿಸಿದೆ.

ಶಿರಸಿಯ ಮರಿಗುಂಡಿ ಗ್ರಾಮದಲ್ಲಿ ಮಾ.16 ಮಧ್ಯಾಹ್ನ 2.30 ಗಂಟೆಯಿಂದ, ಮಾ.19ರಂದು ಉಂಚಳ್ಳಿ ಗ್ರಾಮ ಬನವಾಸಿ ಹೋಬಳಿಯಲ್ಲಿ ಬೆಳಿಗ್ಗೆ 9 ಗಂಟೆಗೆ, ಕಬ್ಬೆ ಗ್ರಾಮ ಬನವಾಸಿ ಹೋಬಳಿಯಲ್ಲಿ 12 ಗಂಟೆಯಿಂದ, ಮಾ.27 ರಂದು ಮಾಳಂಜಿ ಗ್ರಾಮ ಬನವಾಸಿ ಹೋಬಳಿಯಲ್ಲಿ ಬೆಳಿಗ್ಗೆ 9.30 ಗಂಟೆಗೆ ಆಯೋಜಿಸಿದೆ.

ತರಬೇತಿ ಕಾರ್ಯಾಗಾರದಲ್ಲಿ ಸ್ಥಳೀಯ ಗಿಡಮೂಲಿಕೆ ಚಿಕಿತ್ಸೆ ವಿಧಾನಗಳ ಮುಖಾಂತರ ಜಾನುವಾರುಗಳ ಸಮಸ್ಯೆಗಳಿಗೆ ತರಬೇತಿಯನ್ನು ನೀಡಲಾಗುವುದು. ಅಜೀರ್ಣ, ಟೈಪನಿ, ಅತಿಸಾರ, ಮಲಬದ್ಧತೆ, ಎಂಡೋಪರಾಸೈಟ್ಗಳು (ಕರುಳಿನ ಹುಳುಗಳು), ಎಕ್ಟೋಪರಾಸೈಟ್ಗಳು (ಪರೋಪಜೀವಿ, ಉಣ್ಣೆ ಹುಳಗಳು), ಶ್ವಾಸಕೋಶದ ಸೋಂಕುಗಳು, ಪ್ರಾಣಿಜ್ವರ, ಕಾಲುಬಾಯಿರೋಗ, ಪ್ರಾಣಿಗಳಲ್ಲಿ ಊರಿಯೂತ, ಬಂಜೆತನ, ಜರಾಯುಗಳ ಉಳಿಸುವಿಕೆ, ಗರ್ಭಾಶಯದ ಕುಸಿತ, ಕುರಿ ಮತ್ತು ಆಡುಗಳಲ್ಲಿ ನೀಲಿನಾಲಿಗೆ ಕಾಯಿಲೆ, ವಿಷಕಾರಿಕಚ್ಚುವಿಕೆ ಅಥವಾ ಆಹಾರ ವಿಷಪೂರಿತ, ಕಣ್ಣಿನ ಗಾಯಗಳು, ಕರುಗಳ ಸೋರ್, ಪ್ರಾಣಿಗಳ ಆರೋಗ್ಯಕ್ಕಾಗಿ ಪಂಚಗವಿ, ಹಾಲಿನಜ್ವರ ಅಥವಾ ಕ್ಯಾಲ್ಸಿಯಂ ಕೊರತೆ ಇತ್ಯಾದಿಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಜಾನನ ಹೆಗಡೆ ವಲಯ ಸಂಯೋಜಕರು ಧಾನ್ ಫೌಂಡೇಶನ್, ಶಿರಸಿ ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9008207369 ಸಂಪರ್ಕಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.