ಯಲ್ಲಾಪುರ: ಹಿಂದೂ ಸಂಸ್ಕೃತಿ ಮಹಿಳೆಯರಿಗೆ ಗೌರವದ ಸ್ಥಾನ ಮಾನವನ್ನು ನೀಡಿದೆ. ಎಂದು ವನಜಾಕ್ಷಿ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಎಪಿಎಂಸಿಯ ಅಡಿಕೆ ಭವನದಲ್ಲಿ ’ಡಿಯರ್ ಪ್ರೇಂಡ್ಸ್’ ವಾಟ್ಸಪ್ ಬಳಗ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರು ಸ್ವ ಸಾಮರ್ಥ್ಯದಿಂದ ಮುಂದೆ ಬರುವ ಮೂಲಕ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು ಎಂದರು.
ತಾ.ಪಂ ಅಧ್ಯಕ್ಷೆ ಭವ್ಯ ಶೆಟ್ಟಿ ಮಾತನಾಡಿ ಮನುಸ್ಮೃತಿಯಲ್ಲಿ ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಹೇಳಿದ್ದಾರೆ. ಆದರೆ ಪುರಾಣಗಳಲ್ಲಿ ಮಹಿಳೆಗೆ ಪೂಜನೀಯ ಸ್ಥಾನ ನೀಡಿದ್ದಾರೆ. ಈ ತೊಳಲಾಟದಿಂದ ಮಹಿಳೆ ಹೊರಬಂದು ಮಹಿಳೆಯರನ್ನು ಮಹಿಳೆಯರೇ ಗೌರವಿಸುವುದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ನೋವನ್ನು ಹಂಚಿಕೊಳ್ಳಬೇಕು ಎಂದರು.
ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾದ್ಯಾಪಕಿ ಮುಕ್ತಾ ಶಂಕರ ಮಾತನಾಡಿ ಮಹಿಳೆಯರು ಮೊಬೈಲ್ಗಳಿಗೆ ಮಾರು ಹೋಗಿ ತಮ್ಮತನವನ್ನು ಕಳದುಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳು ಕೂಡ ಹೊರ ಆಟಗಳಲ್ಲಿ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರ ಬದಲಾಗಿ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳೋಣ ಎಂದರು.
ಶಿಕ್ಷಕಿ ಶಿವಲೀಲಾ ಹುಣಸಗಿ ಆಧುನಿಕ ಯುಗದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು. ಮಾಲತಿ ಡಿ. ಹೆಗಡೆ, ಚೈತ್ರ ಗೌಡ, ಮಾಯಾ ರಾಜೇಂದ್ರ ಭಟ್ಟ, ವೀಣಾ ಯಲ್ಲಾಪುರಕರ್, ನೇಹಾ ಬಾಳಗಿ, ಭವ್ಯ ಬಾಲಕೃಷ್ಣ ನಾಯ್ಕ, ನಮೀತಾ ಬೀಡಿಕರ್ ಉಪಸ್ಥಿತರಿದ್ದರು.
ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಮುನಾ ನಾಯ್ಕ, ಪುಷ್ಪಾ ನಾಯ್ಕ, ಸಿಸ್ಟರ್ ಪ್ರಮೀಳಾ. ವಿಜಯಾ ಶಾಂತೇಶ್ ದಾಮೋದರ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಫ್ಯಾಷನ್ ಶೋ ನಡೆಯಿತು.
ಪಾರ್ವತಿ ಕಟ್ಟಿಮನಿ ಪ್ರಾರ್ಥಿಸಿದರು. ಡಾ. ಸುಚೇತಾ ಮದ್ಗುಣಿ ಸ್ವಾಗತಿಸಿದರು, ಗ್ರುಪ್ ಎಡ್ಮಿನ್ ಅಕ್ಷತಾ ನಾಯ್ಕ ಪ್ರಾಸ್ತಾವಿಕ ಮಾತನ್ನಾಡಿದರು, ರೂಪಾ ಪಾಟಣಕರ್, ಶಂಷಾದ್ ಹಾರ್ಸಿಕಟ್ಟಾ, ಶ್ಯಾಮಲಾ ನಾಗೇಶ್, ಮೇದಾ ಭಟ್ಟ, ರೂಪಾ ಶೆಟ್, ರಾಧಾ ಗುಡಿಗಾರ್ ನಿರೂಪಿಸಿದರು. ಪ್ರಭಾವತಿ ಗೋವಿ ವಂದಿಸಿದರು,