ಸರ್ಕಾರಿ ನೌಕರ ಭವನದಲ್ಲಿ ನಿಧನರಾದ ಯಕ್ಷಗಾನ ಕಲಾವಿದರಿಗೆ ಸಂತಾಪ ಸಲ್ಲಿಕೆ

ಯಲ್ಲಾಪುರ: ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾವ್ ಹಾಗೂ ಹುಡಗೋಡು ಚಂದ್ರಹಾಸ ಅವರಿಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಯಕ್ಷಗಾನ ಅಭಿಮಾನಿಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಾಗರಾಜ ಹೆಗಡೆ ಕವಲಕ್ಕಿ ಮಾತನಾಡಿ, ಜಲವಳ್ಳಿಯವರು ಯಕ್ಷಗಾನ ಕ್ಷೇತ್ರದಲ್ಲಿ 6 ದಶಕಗಳಿಗಿಂತ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಪಾತ್ರಗಳು ಯುವ ಕಲಾವಿದರಿಗೆ ಅನುಸರಣೀಯ. ಹುಡಗೋಡು ಚಂದ್ರಹಾಸ ಅವರ ಅಕಾಲಿಕ ನಿಧನ ಆಘಾತ ಉಂಟು ಮಾಡಿದೆ. ಕಲಾವಿದರಾಗಿ ಮಾತ್ರವಲ್ಲದೇ ವೈಯಕ್ತಿಕವಾಗಿ ಹಾಗೂ ಸಮಾಜಸೇವಕರಾಗಿ ಜನರೊಂದಿಗೆ ಬೆರೆಯುತ್ತಿದ್ದರು ಎಂದು ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

ಉಪನ್ಯಾಸಕ ಡಾ.ದತ್ತಾತ್ರೇಯ ಗಾಂವ್ಕಾರ, ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ, ಕಲಾವಿದ ಸತೀಶ ಯಲ್ಲಾಪುರ, ರಾಘವೇಂದ್ರ ಭಟ್ಟ ಬೆಳ್ಸೂರು, ನರಸಿಂಹ ಭಟ್ಟ, ಮಂಜುನಾಥ ಹೆಗಡೆ, ರಾಮಕೃಷ್ಣ ಭಟ್ಟ, ವಿಜಯ ಹಿರೇಮಠ ಸೇರಿದಂತೆ ಹಲವು ಕಲಾಭಿಮಾನಿಗಳು ಸಭೆಯಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.