ಶಿಕ್ಷಕರ ಜ್ಞಾನದಿಂದ ಮಕ್ಕಳು ಭವಿಷ್ಯದಲ್ಲಿ ಮುನ್ನಡೆಯಲು ಸಹಕಾರಿ; ಸದಾನಂದ ಸ್ವಾಮಿ

ಶಿರಸಿ: ಶಿಕ್ಷಕರಲ್ಲಿ ಕ್ರಿಯಾಶೀಲತೆ ಹಾಗೂ ಉತ್ತಮ ಜ್ಞಾನ ಸಂಪಾದನೆಯಿದೆ. ಅದನ್ನು ಸರಿಯಾಗಿ ಉಪಯೋಗಿಸಿ ಮಕ್ಕಳಿಗೆ ಪಾಠ ಮಾಡಿದ್ದಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ದತ್ತ ಮುನ್ನಡೆಯಲು ಸಾಧ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ತಿಳಿಸಿದರು.

ಬಿಸ್ಲಕೊಪ್ಪ ವಲಯದ ದಾಸನಕೊಪ್ಪ ಹಾಗೂ ದಮನಬೈಲ್ ಕ್ಲಸ್ಟರ್ ನ ಪ್ರಾಥಮಿಕ ವಿಭಾಗದ ನಲಿಕಲಿ ಸಂಭ್ರಮ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ‌‌ ಕಲೀಕೋಪಕರಣಗಳನ್ನು ತಯಾರಿಸಲಾಗಿದೆ. ಇವು ನಿತ್ಯ ಬಳಕೆಯಾದಾಗ ಮಾತ್ರ ಮಕ್ಕಳ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಲಿಕಲಿ ಗುರುಗೌರವಾರ್ಪಣೆ, ಸಾಧಕರಿಗೆ ಸಮ್ಮಾನ, ನಾವಿನ್ಯಯುತ ನಲಿಕಲಿ ಪೀಠೋಪಕರಣಗಳ ಮೇಳ ಹಾಗೂ ನಲಿಕಲಿ ಅವಲೋಲನ ಸಿಡಿ ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿನ ವಿಜೇತ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಡಿ.ರವೀಂದ್ರ, ಬಿ‌ಆರ್.ಪಿ, ಸಿ.ಆರ್.ಪಿ.ಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.