ಮಾ.17ಕ್ಕೆ ‘ಭಾವಗಳು ಬಸುರಾದಾಗ’ ಕವನ ಸಂಕಲನ ಬಿಡುಗಡೆ

ಶಿರಸಿ: ಕರುನಾಡ ಹಣತೆ ಕವಿ ಬಳಗ(ರಿ) ಉ.ಕ, ಕನ್ನಡ ಸಾಹಿತ್ಯ ಪರಿಷತ್ ಶಿರಸಿ, ಕಬಡ್ಡಿ ಅಮೆಚೂರ್ ಶಿರಸಿ, ಓದುಗರ ವೇದಿಕೆ ಉಂಚಳ್ಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅರುಣ ಕೊಪ್ಪ ಇವರ ‘ಭಾವಗಳು ಬಸುರಾದಾಗ’ ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನ ಮಾ.17 ರಂದು ಉಂಚಳ್ಳಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಆಯೋಜಿಸಿದೆ.

ಅಣ್ಣಪ್ಪ ಬಂಗಾರ್ಯ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಶಿರಸಿಯ ಅಧ್ಯಕ್ಷ ಪ್ರಕಾಶ ಭಾಗವತ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪ್ರೋ.ಕೆ.ಎನ್ ಹೊಸ್ಮನಿ ಕೃತಿ ಬಿಡುಗಡೆಗೊಳಿಸಲಿದ್ದು, ಲೇಖಕ ಸುಬ್ರಾಯ ಮತ್ತೀಹಳ್ಳಿ ಕೃತಿ ಪರಿಚಯಿಸಲಿದ್ದಾರೆ.

ರಾಜ್ಯ ಕರುನಾಡ ಹಣತೆ ಕವಿ ಬಳಗದ ಸಂಸ್ಥಾಪಕ ಅಧ್ಯಕ್ಷ ಕನಕ ಪ್ರೀತೀಶ್, ರಾಜ್ಯಾಧ್ಯಕ್ಷ ಎಸ್.ರಾಜು ಸುಲೇನಳ್ಳಿ, ಸಲಹಾ ಸಮಿತಿ ಅಧ್ಯಕ್ಷ ಗಣಪತಿ.ಗೋ.ಚಲುವಾದಿ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸೇ.ಸ.ಸಂಘ ಉಂಚಳ್ಳಿಯ ಉಪಾಧ್ಯಕ್ಷ ನಾಗರಾಜ ಹೆಗಡೆ, ಜನಮಾಧ್ಯಮ ಪತ್ರಿಕೆ ಗೌರವ ಸಂಪಾದಕ ಜಯರಾಮ ಹೆಗಡೆ, ಚುಸಾಪ ಶಿರಸಿಯ ಅಧ್ಯಕ್ಷ ದತ್ತಗುರು ಕಂಠಿ, ಸಾಹಿತಿ, ಪತ್ರಕರ್ತರಾದ ಕನ್ನೇಶ್ ನಾಯ್ಕ, ಜಿಲ್ಲಾ ಅಮೇಚುರ್ ಕಾರ್ಯದರ್ಶಿ ರಮಾನಂದ ನಾಯ್ಕ, ನಿವೃತ್ತ ಶಿಕ್ಷಕ ಬಿ.ಎಚ್ ನಾಯ್ಕ, ಸಾಹಿತಿ ಎನ್.ವಿ.ಮಂಜುನಾಥ, ಸಾಹಿತಿ ಎ.ಜಿ.ನಾಯ್ಕ ಭರಣಿ, ಕವಿ ಡಾ.ಅಜಿತ್ ಹೆಗಡೆ ಹರಿಶಿ ಉಪಸ್ಥಿತರಿರುವರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.