ಟಾಂಟಾಂ ವಾಹನದವರ ವಿರುದ್ಧ ರಿಕ್ಷಾ ಸಂಘಟನೆಯವರ ಪ್ರತಿಭಟನೆ


ಗೋಕರ್ಣ: ಪೆಸೆಂಜರ ರಿಕ್ಷಾ ಸಂಘಟನೆ ಸದಸ್ಯರು ಟಾಂಟಾಂ ವಾಹನದವರ ವಿರುದ್ಧ ಪ್ರತಿಭಟನೆ ನಡೆಸಿದರು.

ಟಾಂಟಾಂ ರಿಕ್ಷಾ ನಡೆಸುವವರು ಅಕ್ರಮವಾಗಿ ಪಟ್ಟಣದಲ್ಲಿ ಸಂಚರಿಸಿ ರಿಕ್ಷಾ ವ್ಯವಸ್ಥೆ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ತದಡಿ, ಓಂ ಬೀಚ್ ಮುಂತಾದೆಡೆಗಳಿಗೆ ಪ್ರವಾಸಿಗರನ್ನು ಕೊಂಡೊಯ್ದು ರಿಕ್ಷಾದವರಿಗೆ ಪೈಪೋಟಿ ನೀಡುತ್ತಿದ್ದಾರೆ. ಇದರ ಜೊತೆಗೆ ಬೇರೆ ಗ್ರಾಪಂಗೆ ಸೇರಿದ ಹೆಚ್ಚಿನ ಟಾಂಟಾಂ ವಾಹನದವರು ಬಸ್ ನಿಲ್ದಾಣದ ಬಳಿ ಪ್ರವಾಸಿಗರನ್ನು ಕೂಗಿ ಕರೆದು ಗ್ರಾಮಾಂತರ ಸಾರಿಗೆಗೆ ಕೂಡ ನಷ್ಟ ಉಂಟು ಮಾಡುತ್ತಿದ್ದು ಇವರಿಗೆ ನಿಲ್ದಾಣದ ಬಳಿ ಪಾರ್ಕ್ ಮಾಡಲು ಅವಕಾಶ ನೀಡಬಾರದಾಗಿ ಸ್ಥಳಕ್ಕೆ ಹಾಜರಾದ ಪಿಎಸ್‍ಐ ಸಂತೋಷಕುಮಾರ ಅವರಲ್ಲಿ ಮನವಿ ಮಾಡಿಕೊಂಡರು. ರಿಕ್ಷಾ ಸಂಘದ ಗೌರವ ಅಧ್ಯಕ್ಷ ಮಹೇಶ ಶೆಟ್ಟಿ, ಅಧ್ಯಕ್ಷ ಯೆಂಕು ಗೌಡ, ಟೆಂಪೋ ಸಂಘಟನೆಯ ಮಂಜುನಾಥ ನಾಯಕ ಮತ್ತು ನೂರಾರು ಸದಸ್ಯರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.