ಬಂದೂಕುಗಳನ್ನ ಠಾಣೆಗೆ ಜಮಾ ಮಾಡಲು ಕರೆ

ಶಿರಸಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಧಿಕಾರಿಯವರ ಆದೇಶದಂತೆ ಬಂದೂಕು ಹೊಂದಿರುವ ಪ್ರತಿಯೊಬ್ಬರು ತಕ್ಷಣವೆ ಠಾಣೆಯಲ್ಲಿ ಜಮಾ ಮಾಡುವಂತೆ ಪೋ ಲಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶಿರಸಿ ನಗರ ವ್ಯಾಪ್ತಿಯವರು ಶಿರಸಿ ನಗರ ಠಾಣೆ ಮಾರುಕಟ್ಟೆ ಠಾಣೆಗೆ, ಗ್ರಾಮೀಣ ಭಾಗದವರು ಶಿರಸಿ ಗ್ರಾಮೀಣ ಠಾಣೆ ಹಾಗೂ ಬನವಾಸಿ-ದಾಸನಕೊಪ್ಪ ವ್ಯಾಪ್ತಿಯ ಬಂದೂಕು ಹೊಂದಿದದವರು ಬನವಾಸಿ ಪೋಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ವೃತ್ತ ನಿರೀಕ್ಷಕ ಬಿ. ಗಿರೀಶ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.