ತಿನ್ನಲು ರುಚಿಯಾದ ಸಾಬಕ್ಕಿ ಹಲ್ವಾ ಮಾಡಿ ನೋಡಿ.


ಅಡುಗೆ ಮನೆ:  ಸಾಬಕ್ಕಿ ಹಲ್ವಾ ಮಾಡಲು ಬೇಕಾಗುವ ಪದಾರ್ಥ: 1 ಕಪ್ ಸಬ್ಬಕ್ಕಿ, 3 ಕಪ್ ಹಾಲು, ¼ ಕಪ್ ತುಪ್ಪ, ¼ ಕಪ್ ಸಕ್ಕರೆ, ರುಚಿಗೆ ತಕ್ಕಷ್ಟು ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಚಿಟಕಿ ಕೇಸರಿ ಬಣ್ಣ

ಸಾಬಕ್ಕಿ ಹಲ್ವಾ ಮಾಡುವ ವಿಧಾನ: ಒಂದು ಬಾಣಲೆಗೆ ಸಬ್ಬಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತ್ರ ಕುಕ್ಕರಿಗೆ ಹಾಲು, ಸಾಬಕ್ಕಿ ಹಾಕಿ ಒಂದು ವಿಷಲ್ ಕೂಗಿಸಿಕೊಳ್ಳಿ. ನಂತ್ರ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿಯನ್ನು ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಸಬ್ಬಕ್ಕಿ ಮತ್ತು ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತ್ರ ಉಳಿದ ತುಪ್ಪವನ್ನು ಹಾಕಿ ಕೈಯಾಡಿಸುತ್ತಿರಿ. ಬಣ್ಣವನ್ನು ಸೇರಿಸಿ. ತುಪ್ಪ ಬಿಡುತ್ತ ಬರ್ತಾ ಇದ್ದಂತೆ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಗ್ಯಾಸ್ ಆರಿಸಿ. ನಂತ್ರ ತುಪ್ಪ ಸವರಿದ ತಟ್ಟೆಗೆ ಇದನ್ನು ಹಾಕಿ ಆರಲು ಬಿಡಿ

Categories: ಅಡುಗೆ ಮನೆ

Leave A Reply

Your email address will not be published.