ಅನಂತನ ಕಂಚಿನ ಕಂಠದೆದುರಿಲ್ಲ ‘ಕೈ’ ಆರ್ಭಟ; ಜಿಲ್ಲೆಗೆ ‘ತೆನೆಹೊತ್ತ ಮಹಿಳೆ’

ಶಿರಸಿ: ಲೋಕಸಭಾ ಚುಣಾವಣೆಗೆ ರಾಜ್ಯ ಮೈತ್ರಿ ಸರಕಾರದ ಸೀಟು ಹಂಚಿಕೆ ಬಹುತೇಖ ಅಂತಿಮಗೊಂಡಿದ್ದು, 28 ಲೋಕಸಭಾ ಸ್ಥಾನಗಳಿಗೆ ಸ್ಥಾನ ಹಂಚಿಕೆಗೊಂಡಿದೆ ಎಂಬ ಮಾಹಿತಿ ದೊರೆತಿದೆ. ಬುಧವಾರ ಈ ನಿರ್ಣಯ ಅಂತಿಮಗೊಂಡಿದ್ದು, ಉತ್ತರ ಕನ್ನಡಕ್ಕೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಇಳಿಸುವ ಯೋಜನೆ ನಡೆದಿದೆ.

ರಾಜ್ಯದಲ್ಲಿ 20 ಸೀಟುಗಳನ್ನು ಕಾಂಗ್ರೆಸ್ ಮತ್ತು 8 ಸ್ಥಾನಗಳಿಂದ ಜೆಡಿಎಸ್ ಸ್ಪರ್ಧಿಸಲಿದೆ. ಜಿಲ್ಲೆಯಲ್ಲಿ ಹಾಲಿ ಸಂಸದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹವಾ ಇದ್ದು, ಈ ಬಾರಿಯೂ ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧಿಸಲಿದ್ದಾರೆ. ಜೆಡಿಎಸ್ನಿಂದ ಆನಂದ ಅಸ್ನೋಟಿಕರ್ ರೇಸ್ ನಲ್ಲಿದ್ದಾರೆ. ಅಸ್ನೋಟಿಕರ್ ಕಳೆದ ವಿಧಾನಸಭಾ ಚುಣಾವಣೆಯಲ್ಲಿ ರೂಪಾಲಿ ನಾಯ್ಕರೆದುರು ಸ್ಪರ್ಧಿಸಿ ಸೋತಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.