ಶಿರವಾಡದಲ್ಲಿ ನೂತನ ಆಟೋ ನಿಲ್ದಾಣ ಉದ್ಘಾಟನೆ

ಕಾರವಾರ:ತಾಲೂಕಿನ ಶಿರವಾಡದಲ್ಲಿ ನೂತನ ಭಗತ್ ಸಿಂಗ್ ಆಟೋ ನಿಲ್ದಾಣವನ್ನು ಮಾಜಿ ಶಾಸಕ ಸತೀಶ್ ಸೈಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘಟನೆಗಳಿಂದ ಯುವ ಜನತೆ ಒಗ್ಗಟ್ಟಾಗಿರಲು ಸಾದ್ಯವಿದೆ. ಯುವಜನತೆ ಸ್ವಾವಲಂಬಿ ಜೀವನದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸತೀಷ ಕೊಳಂಬಕರ,ಜಿಲ್ಲಾ ಮೀನುಗಾರ ಯುವ ಅಧ್ಯಕ್ಷ ಚೇತನ ಹರಿಕಂತ್ರ, ಮಿತ್ರ ಸಮಾಜ ಆಟೋ ನಿಲ್ದಾಣ ಅಧ್ಯಕ್ಷ ವಿಜು ಹರಿಕಂತ್ರ, ಭಗತ್ ಸಿಂಗ್ ಆಟೋ ನಿಲ್ದಾಣದ ಅಧ್ಯಕ್ಷ ಸಂತೋಷ ಉಳ್ವೇಕರ ಮುಂತಾದವರು ಇದ್ದರು

Categories: ಚಿತ್ರ ಸುದ್ದಿ

Leave A Reply

Your email address will not be published.