ಹಬ್ಬದ ಸಂಭ್ರಮಕ್ಕೆ ಬಾದಾಮಿ ಪೂರಿ ತಿಂದು ಬಾಯಿ ಸಿಹಿ ಮಾಡಿಕೊಳ್ಳಿ


ಅಡುಗೆ ಮನೆ: ಸಾಮಾಗ್ರಿಗಳು: ಮೈದಾ – 2 1/2 ಕಪ್, ಬಾದಾಮಿ – 1/2 ಕಪ್ (ಪೇಸ್ಟ್), ಸಕ್ಕರೆ – 3 1/2 ಕಪ್, ಅಕ್ಕಿ ಪುಡಿ – 1 1/4 ಕಪ್, ಹಾಲು – 100 ಎಮ್ಎಲ್, ಕೇಸರಿ – 1 ಗ್ರಾಮ್, ಏಲಕ್ಕಿ – 1 ಚಮಚ, ತುಪ್ಪ – 25 ಎಮ್ಎಲ್, ಎಣ್ಣೆ – 1 ಕಪ್, ನೀರು – 1 ಕಪ್

ಮಾಡುವ ವಿಧಾನ: ಮೊದಲಿಗೆ ಹಿಟ್ಟನ್ನು ನಾದಲು ಪ್ರಾರಂಭಿಸಿ. ಅಕ್ಕಿ ಹಿಟ್ಟು, ಮೈದಾ, ಹಾಲು ಮತ್ತು ಬಾದಾಮಿ ಪೇಸ್ಟ್ ಅನ್ನು ನಾದಿಕೊಳ್ಳಿ. ಈಗ ಪಾತ್ರೆಗೆ ಸ್ವಲ್ಪ ನೀರು ಹಾಕಿ ಕುದಿಸಿ ಇದಕ್ಕೆ ಕೇಸರಿ, ಸಕ್ಕರೆ ಮತ್ತು ಏಲಕ್ಕಿಯನ್ನು ಸೇರಿಸಿ. ನಂತರ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ. ಇದಾದ ನಂತರ, ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ ಮತ್ತು ಪೂರಿ ಆಕಾರದಲ್ಲಿ ಇದನ್ನು ಲಟ್ಟಿಸಿಕೊಳ್ಳಿ. ಪೂರಿಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು, ಒಂದರ ಮೇಲೆ ಇನ್ನೊಂದು ಇರಿಸಿಕೊಂಡು ಪದರಗಳನ್ನು ನಿರ್ಮಿಸಿಕೊಳ್ಳಿ. ಇದಾದ ನಂತರ, ಇವುಗಳನ್ನು ಲಟ್ಟಿಸಿ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಇದೇ ಹಂತವನ್ನು ಪುನಃ ಅನುಸರಿಸಿ. ಈ ತುಂಡುಗಳನ್ನು ವೃತ್ತಾಕಾರವಾಗಿ ಲಟ್ಟಿಸಿಕೊಳ್ಳಿ ಮತ್ತು ಚಿನ್ನದ ಬಣ್ಣಕ್ಕೆ ಬರುವವರೆಗೆ ಇದನ್ನು ಹುರಿಯಿರಿ. ಇದೀಗ ಹುರಿದ ಎಲ್ಲಾ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿಕೊಳ್ಳಿ. 10 ನಿಮಿಷಗಳವರೆಗೆ ಇದನ್ನು ಪಾಕದಲ್ಲಿ ನೆನೆಯಲು ಬಿಡಿ. ನಂತರ ಪಾಕದಿಂದ ಇದನ್ನು ಹೊರತೆಗೆದು ತಟ್ಟೆಯಲ್ಲಿಡಿ. ನಿಮ್ಮ ಬಾದಾಮಿ ಪೂರಿ ಬಡಿಸಲು ಸಿದ್ಧವಾಗಿದೆ. ಗಣೇಶನ ಮೆಚ್ಚಿನ ಸಿಹಿ ಸವಿಯಲು ಸಿದ್ಧವಾಗಿದೆ. ಬಾದಾಮಿ ಪೂರಿಯ ಬಿಸಿ ಆರಿ ತಣ್ಣಗಾದಾಗ ಇದ ರುಚಿಯನ್ನು ಸವಿಯಿರಿ.

Categories: ಅಡುಗೆ ಮನೆ

Leave A Reply

Your email address will not be published.