ಶಾಸಕಿ ರೂಪಾಲಿಗೆ ಜೀವ ಬೆದರಿಕೆ: ಎಸ್‌ಪಿಗೆ ದೂರು

ಕಾರವಾರ: ಕಳೆದ ಕಲವು ದಿನಗಳಿಂದತ ತಮಗೆ ಜೀವ ಬೆದರಿಕೆ ಇದೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ವಿಧಾನಸಭಾ ಚುನಾವಣೆ ಮೊದಲು ಹಾಗೂ ನಂತರದ ದಿನಗಳಲ್ಲಿ ಬೆದರಿಕೆ ಕರೆಗಳು ಬರುವುದಲ್ಲದೆ ಸಂಚರಿಸುವ ವೇಳೆ ಅಪರಿಚಿತ ವಾಹನಗಳು ತಮ್ಮ ವಾಹನವನ್ನು ಹಿಂಬಾಲಿಸುತ್ತಿವೆ. ಅಲ್ಲದೆ ನಿವಾಸದ ಬಳಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದು, ಕುಟುಂಬಸ್ಥರು ಹಾಗೂ ಸಹಚರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ.

ಕಳೆದ ನ.30 ರಂದು ಕಾರ್ಯಕ್ರಮವೊಂದನ್ನು ಮುಗಿಸಿ ಮಧ್ಯರಾತ್ರಿ ಮರಳುತಿದ್ದಾಗ ಬರುವಾಗ 2 ಕಾರುಗಳು ಹಿಂಬಾಲಿಸುತ್ತಿದ್ದವು. ತಕ್ಷಣ ಸೀಬರ್ಡ್ ಗೇಟ್ ಬಳಿ ನಮ್ಮ ಕಾರನ್ನು ನಿಲ್ಲಿಸಿ ಪೊಲೀಸ್ ನಿರೀಕ್ಷಕರನ್ನು ಕರೆಯಿಸಿ ಭದ್ರತೆಯಲ್ಲಿ ಮನೆಗೆ ತೆರಳಿದ್ದೇನೆ. ಅಲ್ಲದೆ ನಮ್ಮ ನಿವಾಸದ ಬಳಿ ಎರಡು ಬೈಕ್‌ಗಳು ತಮ್ಮ ವಾಹನಕ್ಕೆ ದಾರಿ ನೀಡದೆ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ತೆಗೆದುಕೊಂಡ ಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಗಳಿಂದ ನನಗೆ ಜೀವ ಬೇದರಿಕೆ ಇರುವ ಆತಂಕ ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನನ್ನ ಬೆಂಗಾವಲಿಗೆ ಸಶಸ್ತ್ರ ಪೊಲೀಸರನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಶಾಸಕಿ ಮನವಿ ಮಾಡಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.