ವಿನಾಯಕ ಬ್ರಹ್ಮೂರು ನಿರ್ದೇಶನದ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧ..! ಯಾವುದು ಗೊತ್ತಾ.?


ಕುಮಟಾ: ಪ್ರೌಢಶಾಲೆ ಸೆಮಿಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿನಾಯಕ ಬ್ರಹ್ಮೂರು ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರದ ಟೈಟಲ್ ಈಗ ಬಿಡುಗಡೆಯಾಗಿದ್ದು, ‘ಆಚೆ’ ಎಂಬ ಹೆಸರಿನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಇದನ್ನು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರವೆಂದೇ ಹೇಳಲಾಗುತ್ತಿದ್ದು ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸುತ್ತಿದೆ. ಇದು ಇವರ 6ನೇ ಚಿತ್ರವೂ ಹೌದು.

ದಯಾನಂದ್ ಬಿಳಗಿಯ 2ನೇ ಸಿನಿಮಾ: ರಂಗಭೂಮಿಯ ಖ್ಯಾತರಾದ ದಯಾನಂದ ಬಿಳಗಿ ಅವರು ಚಿತ್ರದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನವರಸಗಳನ್ನು ಬಲ್ಲ ದಯಾನಂದ ನೂರಾರು ನಾಟಕಗಳಲ್ಲಿ ನಟಿಸಿ, ರಾಜ್ಯಾದ್ಯಂತ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದವರಾಗಿದ್ದಾರೆ. ರಂಗಭೂಮಿಯಲ್ಲಿ ದಾಖಲೆ ಮಾಡಿದ ‘ಕುಂಟಕೋಣ ಮೂಕಜಾಣ’ ನಾಟಕವನ್ನೇ ಸಿನಿಮಾ ಮಾಡಲಾಗಿದ್ದು ಈ ಚಿತ್ರವು ಈಗಾಗಲೇ ಬಿಡುಗಡೆ ಹಂತಕ್ಕೆ ಬಂದಿದೆ. ಈ ನಡುವೆಯೇ ವಿನಾಯಕ ಬ್ರಹ್ಮೂರು ಅವರ ‘ಆಚೆ’ ಚಿತ್ರದಲ್ಲಿ ಇವರು ನಟಿಸುವುದು ಖಾತರಿಯಾಗಿದೆ.

ಮುಂಬೈ ಬೆಡಗಿ, ಕನ್ನಡದ್ದೇ ಹುಡ್ಗಿ: ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಮುಂಬೈ ಬೆಡಗಿ ತೇಜಸ್ವಿನಿ ಕಾಣಿಸಿಕೊಳ್ಳಲಿದ್ದಾರೆ. ಇವರು ಮುಂಬೈನಲ್ಲೇ ಬೆಳೆದು ವಿದ್ಯಾಭ್ಯಾಸ ಮಾಡಿದವರು. ಆದರೆ ಮೂಲತಃ ಕನ್ನಡದ ಹುಡುಗಿ. ಉತ್ತರಕನ್ನಡದ ಭಟ್ಕಳ ತವರೂರು. ಕಳೆದ 6 ತಿಂಗಳ ಹಿಂದಷ್ಟೇ ಮುಂಬೈನಿಂದ ಸಿಲಿಕಾನ್ ಸಿಟಿಗೆ ಹಾರಿದ್ದಾರೆ. ಈಗಾಗಲೇ 2 ಚಿತ್ರಗಳಲ್ಲಿ ಅಭಿನಯಿಸಿದ್ದು, ಆಲ್ಬಮ್ ಸಾಂಗ್‍ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಆಚೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದು ಈಗ ಖಚಿತಗೊಂಡಿದೆ.

ಮಾರ್ಚ್‍ನಲ್ಲಿ ಚಿತ್ರೀಕರಣ: ಚಿತ್ರದ ಟೈಟಲ್ ಹಾಗೂ ನಾಯಕ-ನಾಯಕಿಯರ ಬಗ್ಗೆ ಮಾತ್ರ ಚಿತ್ರತಂಡ ಸುಳಿವು ನೀಡಿದ್ದು, ಚಿತ್ರದ ಕಥೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದ್ದು ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ ಎಂದು ವಿನಾಯಕ ಬ್ರಹ್ಮೂರು ತಿಳಿಸಿದ್ದಾರೆ.

Categories: ಸಿನಿ-ಕ್ರೀಡೆ

Leave A Reply

Your email address will not be published.