ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದಲೇ ಕಾರವಾರ, ಶಿರಸಿ ಬಸ್ ಪ್ರಾರಂಭ..

ಯಲ್ಲಾಪುರ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದಲೇ ಕಾರವಾರ ಮತ್ತು ಶಿರಸಿ ಮಾರ್ಗವಾಗಿ ಸಂಚರಿಸುವ ಬಸ್ ಗಳು ಓಡಾಡಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶಿವರಾಮ ಹೆಬ್ಬಾರ ಸೂಚಿಸಿದ್ದಾರೆ.

ಮೊದಲು ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಕಾರವಾರ, ಯಲ್ಲಾಪುರ, ಕುಮಟಾ, ಶಿರಸಿ ಮುಂತಾದ ಕಡೆಗೆ ಬಸ್ಸು ಸಂಚರಿಸುತ್ತಿತ್ತು. ಇತ್ತೀಚೆಗೆ ಅದನ್ನು ರದ್ದುಪಡಿಸಿ ಹೊಸ ಬಸ್ ನಿಲ್ದಾಣದಿಂದ ಸಂಚರಿಸುವಂತೆ ನೋಡಿಕೊಳ್ಳಲಾಗಿತ್ತು. ಹೀಗಾಗಿ ಅಂಗವಿಕಲರು, ವೃದ್ಧರು ತೀವೃ ತೊಂದರೆಗೆ ಒಳಗಾಗಿದ್ದರು. ನೊಂದ ಜನತೆ ಸಂಸ್ಥೆಯ ಅಧ್ಯಕ್ಷ ಹೆಬ್ಬಾರರಲ್ಲಿ ಮನವಿ ಸಲ್ಲಿಸಿ, ಹಳೆ ಬಸ್ ನಿಲ್ದಾಣದಿಂದಲೇ ಬಸ್ಸುಗಳು ಸಂಚರಿಸುವಂತೆ ಮಾಡುವಂತೆ ವಿನಂತಿಸಿದ್ದರು.

ಈ ಹಿನ್ನೆಲೆಯಲ್ಲಿ ಜನರ ಸಮಸ್ಯೆಯನ್ನು ಅರಿತ ಹೆಬ್ಬಾರ್ ಶಿರಸಿ ಮತ್ತು ಕಾರವಾರ ಮಾರ್ಗದ ಬಸ್ಸುಗಳನ್ನು ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದಲೇ ಸಂಚರಿಸಲು ಸೂಚಿಸಿ ಆದೇಶ ಹೊರಡಿಸಿದ್ದಾರೆ. ಫೆ.21ರಿಂದ ನೂತನ ವ್ಯವಸ್ಥೆ ಜಾರಿಗೆ ಬಂದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.