ಮಾ.3ಕ್ಕೆ ಕದಂಬ ಕಾವ್ಯ ವಾಚನ ಸ್ಪರ್ಧೆ

ಶಿರಸಿ: ನಗರದ ಪ್ರತಿಭಾ ಪ್ರೋತ್ಸಾಹ ವೇದಿಕೆಯ 8ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಸಮಾರಂಭದ ಜೊತೆಗೆ ಈ ಬಾರಿ ವಿಶೇಷವಾಗಿ ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕದಂಬ ಕಾವ್ಯ ವಾಚನ ಸ್ಪರ್ಧೆ ಏರ್ಪಡಿಸಲಾಗಿದೆ.

ಮಾ.3ರಂದು ಬೆಳಿಗ್ಗೆ 10.30ಕ್ಕೆ ನಗರದ ಸಾಮ್ರಾಟ್ ವಿನಾಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಯ್ಕೆಯದ 20 ಕವನಗಳನ್ನು ಸ್ಪರ್ಧೆಗಾಗಿ ವೇದಿಕೆಯಲ್ಲಿ ವಚನ ಮಾಡಲು ಅವಕಾಶ ಮಾಡಿಕೊಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಬನವಾಸಿಯ ಇತಿಹಾಸ, ಕದಂಬ ಆಳ್ವಿಕೆ, ಶಿಲ್ಪಕಲೆ, ಪರಿಸರ, ಕೃಷಿ ಸೇರಿದಂತೆ ಬನವಾಸಿಯ ಸಮಗ್ರ ಚಿತ್ರಣವನ್ನೊಳಗೊಂಡ 20 ಸಾಲಿನ ಕವನ ಬರೆದು ತಮ್ಮ ವಿಳಾಸ, ಕಾಲೇಜಿನ ಹೆಸರು, ಗುರುತಿನ ಚೀಟಿ, ಮೊಬೈಲ್ ನಂಬರ್ ನಮೂದಿಸಿ ಫೆ.27ರೊಳಗೆ ಪ್ರತಿಭಾ ವೇದಿಕೆಯ ಕಾರ್ಯದರ್ಶಿ ಜೆ.ಆರ್.ಸಂತೋಷಕುಮಾರ ಗಣೇಶ ನಗರ ರಸ್ತೆ, ಶಿರಸಿ ಈ ವಿಳಾಸಕ್ಕೆ ಇಲ್ಲವೆ ಖುದ್ದಾಗಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9986131002 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.