ರುಚಿಯಾಗಿ ಮನೆಯಲ್ಲೇ ಮಾಡಿ ನೋಡಿ ಪನ್ನೀರ್ ಜಾಲ್ಫ್ರೆಜಿ


ಅಡುಗೆ ಮನೆ: ಪನ್ನೀರ್ ಜಾಲ್ಫ್ರೆಜಿ ಮಾಡಲು ಬೇಕಾಗುವ ಪದಾರ್ಥ: 2 ಇಂಚಿನಂತೆ ಉದ್ದದಾಗಿ ಕತ್ತರಿಸಿದ 150 ಗ್ರಾಂ ಪನ್ನೀರ್, 2 ಇಂಚು ಉದ್ದುದ್ದ ಕತ್ತರಿಸಿದ ¼ ಕಪ್ ಕ್ಯಾರೆಟ್, 1 ಮಧ್ಯಮ ಗಾತ್ರದ ಈರುಳ್ಳಿ ( ಕತ್ತರಿಸಿದ್ದು)
ಉದ್ದವಾಗಿ ಕತ್ತರಿಸಿದ 1 ಹಸಿರು ಮೆಣಸಿನ ಕಾಯಿ, 1 ಡೊಳ್ಳು ಮೆಣಸು, 1 ಟೋಮೋಟೋ. 1/4 ಕಪ್ ಟೋಮೋಟೋ ಪ್ಯೂರಿ, 1 ಟೀ ಸ್ಪೂನ್ ಜೀರಿಗೆ, 1 ಟೀ ಸ್ಪೂನ್ ಟೋಮೋಟೋ ಕೆಚಪ್, 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಬೆಳ್ಳುಳ್ಳಿ-ಶುಂಠಿ ಪೇಸ್ಟ್, 1/8 ಚಮಚ ಅರಿಶಿನ ಪುಡಿ, 1 ಚಮಚ ಕೊತ್ತಂಬರಿ ಪುಡಿ, 1/4 ಚಮಚ ಮಸಾಲಾ ಪುಡಿ. ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ.

ಪನ್ನೀರ್ ಜಾಲ್ಫ್ರೆಜಿ ಮಾಡುವ ವಿಧಾನ: ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಮಧ್ಯಮ ಜ್ವಾಲೆಯಲ್ಲಿ ಬಿಸಿ ಮಾಡಿ. ಇದಕ್ಕೆ ಜೀರಿಗೆ ಹಾಕಿ ಹುರಿದುಕೊಳ್ಳಿ. ನಂತ್ರ ಕತ್ತರಿಸಿಟ್ಟ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತ್ರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಕ್ಯಾರೆಟ್, ಮೆಣಸಿನ ಕಾಯಿ ಹಾಕಿ 2 ನಿಮಿಷ ಫ್ರೈ ಮಾಡಿ. ನಂತ್ರ ಟೋಮೋಟೋ ಹಾಗೂ ಡೊಳ್ಳು ಮೆಣಸು ಹಾಕಿ. ಟೋಮೋಟೋ ಕೆಚಪ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲೆ ಪುಡಿ ಹಾಗೂ ಉಪ್ಪನ್ನು ಹಾಕಿ.

ಇದಾದ ನಂತ್ರ ಒಂದರಿಂದ ಮೂರು ಕಪ್ ನೀರು ಹಾಕಿ. ಎರಡು ನಿಮಿಷಗಳ ಕಾಲ ಕುದಿಸಿ. ನಂತ್ರ ಪನ್ನೀರ್ ಹಾಕಿ ಬೇಯಲು ಬಿಡಿ. ಗ್ರೇವಿಯಂತಾದ ಮೇಲೆ ಗ್ಯಾಸ್ ಬಂದ್ ಮಾಡಿ. ಕೊತ್ತಂಬರಿ ಸೊಪ್ಪನ್ನು ಅಲಂಕರಿಸಿ ಸರ್ವ್ ಮಾಡಿ.

Categories: ಅಡುಗೆ ಮನೆ

Leave A Reply

Your email address will not be published.