ವಚನಕಾರರು ರಾಜ್ಯದ ಸಾಂಸ್ಕೃತಿಕ ವೈಭವಕ್ಕೆ ವಚನಗಳ ಕಿರೀಟ ತೊಡಿಸಿದವರು: ರಾಮಚಂದ್ರ ಮಡಿವಾಳ

 


ಕುಮಟಾ: ಕರ್ನಾಟಕದ ಸಾಂಸ್ಕೃತಿಕ ವೈಭವಕ್ಕೆ ವಚನಗಳ ಕಿರೀಟ ತೊಡಿಸಿದವರು ವಚನಕಾರರು. ಸಾಮಾಜಿಕ ಅನಿಷ್ಠಗಳನ್ನು ಹೋಗಲಾಡಿಸಲು ವಚನಗಳ ಪ್ರಹಾರದ ಮೂಲಕ ಸಮಾಜ ಸ್ವಚ್ಛಗೊಳಿಸಿದ ಶ್ರೀ ಶಿವಯೋಗಿ ಸಿದ್ದರಾಮ, ಸವಿತಾ ಮಹರ್ಶಿ, ಶ್ರೀ ಅಂಬಿಗರ ಚೌಡಯ್ಯ ಮಹಾನ್ ಯೋಗಿಗಳು ಎಂದು ಮಲ್ಲಾಪುರ ಪ್ರೌಢಶಾಲೆಯ ಸಹ ಶಿಕ್ಷಕ ರಾಮಚಂದ್ರ ಮಡಿವಾಳ ಹೇಳಿದರು.

ಮಂಗಳವಾರ ತಾಲೂಕಾ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಂಡ ಶ್ರೀ ಶಿವಯೋಗಿ ಸಿದ್ದರಾಮ, ಸವಿತಾ ಮಹರ್ಶಿ, ಶ್ರೀ ಅಂಬಿಗರ ಚೌಡಯ್ಯ ಇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಸಮಾಜದಲ್ಲಿಯ ಕೊಳಕುಗಳನ್ನು ಹೋಗಲಾಡಿಸಲು ಕಾಯಕದ ಮೂಲಕ ವಿಶೇಷ ಸೇವೆ ಸಲ್ಲಿಸಿದ ಕಾಯಕ ಶಿವಯೋಗಿ ಸಿದ್ದರಾಮ. ನಿರಂತರ ಕಾಯಕದ ಮೂಲಕ ಜೀವನವನ್ನು ಧನ್ಯವನ್ನಾಗಿಸಬಹುದೆಂದು ಪ್ರಬಲವಾಗಿ ನಂಬಿದವರು. ಜೀವನ ಒಂದು ಕನಸಿನ ಲೋಕ. ಅದು ಯಾವ ಗಳಿಗೆಯಲ್ಲೂ ಮುಗಿಯಬಹುದು. ಶೋಷಣೆಯನ್ನು ಅನುಭವಿಸಿ ವಚನಕಾರರಾಗಿ ಸಿದ್ಧ ಪಡೆದು ಅಂತಹ ಸಮಾಜದ ವಿರುದ್ಧ ಸಿಡಿದೆದ್ದವರು ಸಿದ್ದರಾಮ. ಉಪದೇಶಗಳು ಸರ್ವರಿಗೂ ಅನ್ವಯವಾಗಬೇಕೆಂದು ಪ್ರತಿಪಾದಿಸಿದವರು ಸಿದ್ದರಾಮ. ಭಕ್ತಿ ಗೀತೆಗಳ ಮೂಲಕ ಸಮಾಜ ತಿದ್ದುವ ಪ್ರಯತ್ನ ಮಾಡಿದವರು ಸವಿತಾ ಮಹರ್ಶಿ. ಇಂತಹ ವಿಶೇಷ ಯೋಗಿಗಳ ಆದರ್ಶ ಗುಣಗಳನ್ನು ಜೀವನದಲ್ಲಿ ಅವಳಡಿಸಿಕೊಳ್ಳಬೇಕು ಎಂದರು.

ಹೊನ್ನಾವರದ ಶಿಕ್ಷಕ ಶಂಕರ ಹರಿಕಾಂತ ಅಬಿಗರ ಚೌಡಯ್ಯ ಅವರ ಕುರಿತು ಉಪನ್ಯಾಸ ನೀಡಿ ಮಾತು ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಕಾಯಕದಿಂದ ಜೀವನ ಕಟ್ಟಿದವರು ವಚನಕಾರರು. ವಿಕಾರಕ್ಕೆ ಆಕಾರ ನೀಡಿದವರು.ಅಂಬಿಗ ಚೌಡಯ್ಯ ಸಮಾಜದಲ್ಲಿ ಮಹಾ ಕಾರ್ಯಗಳ ಮೂಲಕ ಅವರು ಸದಾ ಪ್ರಸ್ತುತರು. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. ತಹಶೀಲ್ದಾರ ಮೇಘರಾಜ ನಾಯ್ಕ ಮಾತನಾಡಿ ಎಲ್ಲ ವಚನಕಾರರು ಒಂದಲ್ಲೊಂದು ಶೋಷಣೆ ಇಲ್ಲವೆ ಸಮಾಜದ ಅನಿಷ್ಠಗಳನ್ನು ಹೋಗಲಾಡಿಸಲು ವಚನಕಾರರಾಗಿ ಕಾಯಕ ಯೋಗಿಗಳಾಗಿ ಸಮಾಜವನ್ನು ತಿದ್ದಿದ್ದಾರೆ ಎಂದರು.

ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಕೋರಿದರು. ಬಿಇಓ ಎ ಜಿ ಮುಲ್ಲಾ ಉಪಸ್ಥಿತರಿದ್ದರು. ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು. ತಾರಾ ನಾಯ್ಕ, ಗಣೇಶ ಸ್ತುತಿ ಪ್ರಸ್ತುತ ಪಡಿಸಿದರು. ಯಶೋಧಾ ಹೊಸ್ಕಟ್ಟಾ ಸ್ವಾಗತಿಸಿದರು. ಯೊಗೇಶ ಕೊಡ್ಕಣಿ ನಿರೂಪಿಸಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.