ವಕೀಲರ ಬೇಡಿಕೆ ಈಡೇರಿಕೆಗಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಶಿರಸಿ: ವಕೀಲರ ಮೂಲಭೂತ ಅವಶ್ಯಕತೆಗಳ ಈಡೇರಿಕೆಗಾಗಿ ಅಖಿಲ ಭಾರತ ವಕೀಲರ ಪರಿಷತ್ ನಿರ್ಣಯಗಳನ್ನು ತೆಗೆದುಕೊಂಡು, ಬೆಂಬಲಿಸಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳಿಗೆ ಮಂಗಳವಾರ ಶಿರಸಿ ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ನಾಯ್ಕ ನೇತೃತ್ವದಲ್ಲಿ ಸರ್ವಸಾಧಾರಣ ಸಭೆ ಕರೆದಿತ್ತು.

ಸಭೆಯಲ್ಲಿ ಅಖಿಲ ಭಾರತ ವಕೀಲರ ಪರಿಷತ್ ನಿರ್ಣಯಗಳನ್ನು ಬೆಂಬಲಿಸಿ ಈಡೇರಿಕೆಗಾಗಿ ಕೋರ್ಟ ಆವರಣದಿಂದ ಮೆರವಣಿಗೆಯಲ್ಲಿ ತೆರಳಿ ಸಹಾಯಕ ಕಮೀಷನರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಸರ್ವಸದಸ್ಯರು ಭಾಗವಹಿಸಿ ಬೆಂಬಲ ಕೋರಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.