ವಕೀಲರ ಪ್ರತಿಭಟನಾ ದಿನಕ್ಕೆ ಜಿಲ್ಲಾ ವಕೀಲರ ಸಂಘ ಬೆಂಬಲ: ಜಿಲ್ಲಾಡಳಿತಕ್ಕೆ ಮನವಿ

ಕಾರವಾರ: ಜಿಲ್ಲೆಯ ನ್ಯಾಯಾಲಯದ ಕಲಾಪದಿಂದ ವಕೀಲರು ಹೊರಗುಳಿದು ವಕೀಲರ ಪ್ರತಿಭಟನಾ ದಿನಕ್ಕೆ ಜಿಲ್ಲಾ ವಕೀಲರ ಸಂಘ ಬೆಂಬಲ ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಾರ್ ಕೋನ್ಸಿಲ್ ಆಪ್ ಇಂಡಿಯಾ ವಕೀಲರ ಪರಿಷತ್ ಈ ಹಿಂದೆ ನಿರ್ಣಯದಂತೆ ಕೇಂದ್ರ ಸರ್ಕಾರ ವಕೀಲರ ಕ್ಷೇಮಾಭಿವೃದ್ಧಿಗಾಗಿ ಹಾಗೂ ಸಂರಕ್ಷಣೆಗಾಗಿ ಕೇಂದ್ರ ಬಜೆಟ್‍ನಲ್ಲಿ 500 ಕೋಟಿ ಪ್ರತ್ಯೇಕ ಇಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಆದರೆ ಈ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣ್ಣನೆ ನೀಡದ ಹಿನ್ನೆಲೆಯಲ್ಲಿ ದೇಶದಾದ್ಯಂತ ಒಂದು ದಿನದ ಮಟ್ಟಿಗೆ ರಾಷ್ಟ್ರೀಯ ವಕೀಲರ ಪರಿಷತ್ ಪ್ರತಿಭಟನಾ ದಿನವನ್ನಾಗಿ ಆಚರಿಸುವ ಮೂಲಕ ಠರಾವನ್ನು ಮಾಡಿ ಪ್ರಧಾನಮಂತ್ರಿಗಳಿಗೆ ಮನವಿ ಮೂಲಕ ಕಳುಹಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ವಕೀಲರ ಪ್ರತಿಭಟನಾ ದಿನವನ್ನು ಜಿಲ್ಲಾ ವಕೀಲರ ಸಂಘ ಕಾರವಾರದಿಂದ ವಕೀಲರು ನ್ಯಾಯಲಯದ ಕಾರ್ಯಕಲಾಪಗಳಿಂದ ಹೊರಗುಳಿದು ಭಾರತ ವಕೀಲರ ಪರಿಷತ್ತು ನಿರ್ಣಯಿಸಿದ ಠರಾವನ್ನು ಬೆಂಬಲಿಸಿದರು. ಈ ಬೆಂಬಲಕ್ಕೆ ಅಧ್ಯಕ್ಷರಾದ ಚಂದ್ರಶೇಖರ ಹೆಚ್ ನಾಯ್ಕ ನೇತೃತ್ವದಲ್ಲಿ ವಕೀಲರು ಸಂಘದ ಠರಾವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ರವಾನಿಸಲಾಗಿದೆ.

ವಕೀಲರು ನ್ಯಾಯಾಲಯದ ಕಲಾಪದಿಂದ ಹೊರಗುಳಿದಿದ್ದರಿಂದ ಇಂದು ಜಿಲ್ಲೆಯ ಎಲ್ಲಾ ನ್ಯಾಯಾಲಯ ಕಲಾಪ ನಡೆಸಲಿಲ್ಲ ಎಂದು ವಕೀಲ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯ್ಕ ತಿಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.