ರಥಸಪ್ತಮಿ ಪ್ರಯುಕ್ತ ಗೋಕರ್ಣದ ಮಹಾರಥಕ್ಕೆ ಪೂಜೆ ಸಲ್ಲಿಕೆ

ಗೋಕರ್ಣ: ಮಹಾಬಲೇಶ್ವರ ದೇವಾಲಯದಲ್ಲಿ ರಥಸಪ್ತಮಿ ದಿನವಾದ ಮಂಗಳವಾರ ಮಹಾರಥಕ್ಕೆ ಪೂಜೆ ಸಲ್ಲಿಸಿ ಮಹಾರಥವನ್ನು ರಥದ ಮನೆಯಿಂದ ಹೊರತೆಗೆಯಲಾಯಿತು.

ವೇ.ನಾರಾಯಣ ಪಂಡಿತ ಪೂಜೆ ನೆರವೇರಿಸಿದರು. ಉಪಾಧಿವಂತ ಮಂಡಳಿ ಸದಸ್ಯರು, ಹಾಲಕ್ಕಿ ಸಮುದಾಯದವರು, ಖಾರ್ವಿ ಸಮಾಜದವರು, ಗಾಬಿತ ಸಮುದಾಯದವರು ಮತ್ತು ಊರ ನಾಗರಿಕರು, ಭಕ್ತರು ಉಪಸ್ಥಿತರಿದ್ದರು. ಇದರಿಂದ ಮಹಾರಥ ಕಟ್ಟುವ ಕೆಲಸಕ್ಕೆ ಚಾಲನೆ ದೊರೆತಿದ್ದು, ಮಾ.7 ರಂದು ಮಹಾರಥೋತ್ಸವ ಜರುಗಲಿದ್ದು, ಶಿವರಾತ್ರಿ ಉತ್ಸವಕ್ಕೆ ಶ್ರೀ ಕ್ಷೇತ್ರ ಸಿದ್ಧಗೊಳ್ಳುತ್ತಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.