ಫೆ.16ಕ್ಕೆ ‘ಅಡವಿ ಅಡುಗೆ’ ಕಾರ್ಯಾಗಾರ

ಶಿರಸಿ: ಸುವರ್ಣ ಸಹ್ಯಾದ್ರಿ ಶಿರಸಿ, ಸೆಲ್ಕೋ ಫೌಂಡೇಶನ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಅಡವಿ ಅಡುಗೆ’ ಕಾರ್ಯಾಗಾರವನ್ನ ತಾಲೂಕಿನ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಫೆ.16ರ ಶನಿವಾರ ಬೆಳಿಗ್ಗೆ 10.30 ಘಂಟೆಯಿಂದ ಏರ್ಪಡಿಸಿದೆ.

ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಹರೀಶ್ ಹಂದೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಡಿ. ಸುದರ್ಶನ್, ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್,ಎನ್, ಹೆಗಡೆ ಗೋರ್ಸಗದ್ದೆ, ಹಿರಿಯ ಸಮಾಜ ಕಾರ್ಯಕರ್ತ ಆರ್,ಎಸ್.ಹೆಗಡೆ ಹರಗಿ, ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಳವೆ ಗ್ರಾಮದ ಹಿರಿಯ ಈರಾ ನಾರಾಯಣ ಗೌಡ ವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.