ಧಾರವಾಡ ಒಕ್ಕೂಟ ಹೊಸೂರು ಹಾಲು ಸಂಘಕ್ಕೆ ಅಗತ್ಯ ಸೌಲಭ್ಯ ನೀಡಿಕೆಗೆ ಸಿದ್ಧ; ಶಂಕರಪ್ಪ ವಿ


ಸಿದ್ದಾಪುರ: ಧಾರವಾಡ ಒಕ್ಕೂಟ ಹೊಸೂರಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಕ್ಷೀರಕೇಂದ್ರದಲ್ಲಿ ಹಾಲು ಸಂಘಕ್ಕಿರು ಸೌಲಭ್ಯವನ್ನು ಹಂತಹಂತವಾಗಿ ನೀಡಲು ಸಿದ್ದ ಇದೆ ಹಾಗೂ ಸಂಘದ ಸಿಬ್ಬಂದಿಗಳಿಗೆ ಸೇವಾ ಭದ್ರತೆ ನೀಡಲು ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರಪ್ಪ ವಿ. ಮುಗದ ಹೇಳಿದರು.

ಪಟ್ಟಣದ ಹೊಸೂರಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಕ್ಷೀರಕೇಂದ್ರದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ/ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಂಗಳವಾರ ಮಾತನಾಡಿದರು. ಒಕ್ಕೂಟದಿಂದ ಸಂಘಗಳಿಗೆ ನೀಡುವ ಮಾರ್ಜಿನ ಹಣವನ್ನು ಹೆಚ್ಚಿಗೆ ಮಾಡುವುದಕ್ಕೆ ಚಿಂತನೆ ನಡೆಸಲಾಗುವುದು. ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯ 2.5ಲಕ್ಷ ಲೀಟರ್‍ನಷ್ಟು ಹಾಲು ಶೇಖರಣೆ ಆಗುತ್ತಿದ್ದು ಇದರಲ್ಲಿ 1ಲಕ್ಷ ಹಾಲು ಮಾರಾಟವಾದರೆ 1.5ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಮಾರಾಟಮಾಡಲಾಗುತ್ತದೆ. ಒಕ್ಕೂಟದ 33ವರ್ಷದ ಇತಿಹಾಸದಲ್ಲಿ ಲಾಭಗಳಿಸಿದ ವರ್ಷಗಳು ಕಡಿಮೆ.ಆದರೆ ಈ ವರ್ಷ ಹೆಚ್ಚು ಲಾಭಗಳಿಸುವುದಲ್ಲದೆ ಹಾಲು ಉತ್ಪಾದಕರಿಗೆ ಹೆಚ್ಚಿನ ಹಣ ನೀಡುವುದಕ್ಕೂ ಮುಂದಾಗಿದೆ. ಜ.1ರಿಂದ ಮೂರು ತಿಂಗಳಿಗಾಗಿ 1ಲೀಟರಿಗೆ 1.75ಪೈಸೆ ಹೆಚ್ಚಿಸಿದ್ದು ಅದನ್ನು ಮುಂದುವರೆಸುವ ವಿಚಾರವೂ ಇದೆ ಎಂದು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಎಲ್.ಕೆ.ಹೆಗಡೆ ಬಿದ್ರಕಾನ ಮಾತನಾಡಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಜಾಗವನ್ನು ಶಂಕರಪ್ಪ ವಿ.ಮುಗದ ಅವರು ಒಕ್ಕೂದ ಅಧ್ಯಕ್ಷರಾದ ಮೇಲೆ ಅಭಿವೃದ್ಧಿಗೆ ಅವಕಾಶ ನೀಡಿದ್ದಾರೆ. ಮುಂದಿನ ದಿನದಲ್ಲಿ ಇಲ್ಲಿ ಎಲ್ಲ ಸೌಲಭ್ಯ ಸಿಗುವ ವ್ಯವಸ್ಥೆ ಮಾಡಿಕೊಡಬೇಕೆಂದರು.

ಇದೇ ವೇಳೆಯಲ್ಲಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರಪ್ಪ ವಿ.ಮುಗದ ಅವರನ್ನು ನಿವೃತಿ ಹೊಂದಿದ ಬಿಳಗಿ ಹಾಲು ಸಂಘದ ಮುಖ್ಯಕಾರ್ಯನಿರ್ವಾಹಕ ದಯಾನಂದ ಚಿನಿವಾರ ಹಾಗೂ ವಾಜಗದ್ದೆ ಹಾಲು ಸಂಘದ ಮುಖ್ಯ ಕಾರ್ಯನಿರ್ವಾಹಕ ಗಜಾನನ ಹೆಗಡೆ ಸುಳಗಾರ ಅವರನ್ನು ಸನ್ಮಾನಿಸಲಾಯಿತು. ಬಿಳಗಿ, ನಿಡಗೋಡ, ಶಿರಳಗಿ ಹಾಲು ಸಂಘದ ಅಧ್ಯಕ್ಷರು ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರಪ್ಪ, ವಿಸ್ತರಣಾಧಿಕಾರಿ ಪ್ರಕಾಶ, ಹೇಮಾವತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.