ಒಮ್ಮೆ ಈ ಥರದ ಕ್ಯಾಬೇಜ್ ಪಕೋಡ ಮಾಡಿ ಸವಿದು ನೋಡಿ


ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ 2 ಕಪ್ ಕ್ಯಾಬೇಜ್, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, ಮುಕ್ಕಾಲು ಕಪ್ ಕಡಲೆ ಹಿಟ್ಟು, ಕಾಲು ಕಪ್ ಅಕ್ಕಿ ಹಿಟ್ಟು, ಒಂದು ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಅರಿಶಿನ, ಚಿಟಿಕೆ ಇಂಗು, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಒಂದು ಬೌಲ್ ನಲ್ಲಿ ಹೆಚ್ಚಿದ ಕ್ಯಾಬೇಜ್, ಈರುಳ್ಳಿ ಹಾಕಿ. ಅದಕ್ಕೆ ಕಡಲೆಹಿಟ್ಟು, ಅಕ್ಕಿ ಹಿಟ್ಟನ್ನು ಕೂಡ ಹಾಕಿಕೊಳ್ಳಿ. ಅಚ್ಚಖಾರದ ಪುಡಿ, ಅರಿಶಿನ, ಇಂಗು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಎಲೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈರುಳ್ಳಿ ಮತ್ತು ಕ್ಯಾಬೇಜ್ ಅನ್ನು ಚೆನ್ನಾಗಿ ಹಿಸುಕಿದರೆ ಅದರಿಂದ ನೀರಿನ ಅಂಶ ಹೊರಬರುತ್ತದೆ. ಹಿಟ್ಟನ್ನು ಕಲೆಸಲು ಸುಲಭವಾಗುತ್ತದೆ. ಅಗತ್ಯವಿದ್ದಲ್ಲಿ 2 ಚಮಚ ನೀರು ಬೆರೆಸಬಹುದು. ರೆಡಿ ಮಾಡಿದ ಹಿಟ್ಟನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಬಿಸಿ ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಪಕೋಡ ಗರಿಗರಿಯಾಗುವವರೆಗೆ ಹೊಂಬಣ್ಣಕ್ಕೆ ಬರುವವರೆಗೆ ಕರಿಯಿರಿ. ಗರಿಗರಿಯಾದ ಕ್ಯಾಬೇಜ್ ಪಕೋಡವನ್ನು ಟೊಮೆಟೋ ಸಾಸ್ ಜೊತೆಗೆ ಸವಿಯಿರಿ

Categories: ಅಡುಗೆ ಮನೆ

Leave A Reply

Your email address will not be published.