ಹಿಂದೂ ಕ್ವಿಜ್ ಸ್ಪರ್ಧೆ: ಲಯನ್ಸ್ ವಿದ್ಯಾರ್ಥಿಗಳು ಪ್ರಥಮ


ಶಿರಸಿ: ಹುಬ್ಬಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಫೆ.4 ಸೋಮವಾರ ನಡೆದ ಪ್ರತಿಷ್ಠಿತ ಹಿಂದೂ ಕ್ವಿಜ್ ಸ್ಪರ್ಧೆಯಲ್ಲಿ ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ್ದಾರೆ.

ಲಯನ್ಸ್ ಶಾಲೆಯ ಲಕ್ಷ್ಮೀಶ್ ಸಿ. ನಾಯ್ಕ, ಚ್ಯವನ್ ಶರ್ಮಾ ಭಾಗವಹಿಸಿ ಸೈಕಲ್ ಮತ್ತು ರೂ. 5000 ಮೌಲ್ಯದ ಗಿಪ್ಟ್ ಹ್ಯಾಂಪರ್ ಹಾಗೂ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಲಯನ್ಸ್ ಶಾಲೆ ಎರಡನೆ ಬಾರಿ ಈ ಪ್ರಶಸ್ತಿ ಪಡೆದಿದ್ದು ಒಂದು ದಾಖಲೆಯಾಗಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಪಕರು, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದ ಪೂರ್ವಕವಾಗಿ ಅಭಿನಂದಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.