ಸೀತಾನಗರದ ಅಂಗನವಾಡಿಯಲ್ಲಿ ಎಚ್‍ಐವಿ ಬಗ್ಗೆ ಜಾಗೃತಿ ಕಾರ್ಯಕ್ರಮ

ಕಾರವಾರ: ನಗರದ ಸೀತಾನಗರದ ಅಂಗನವಾಡಿಯಲ್ಲಿ ಬದುಕು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ)ಯ ವತಿಯಿಂದ ಎಚ್‍ಐವಿ/ಏಡ್ಸ್ ಕುರಿತು ಜನ ಜಾಗೃತಿ ಕಾರ್ಯಕ್ರಮ ನಡೆಯಿತು.

ನಗರ ಸಭೆಯ ಸದಸ್ಯೆ ಸೀತಾನಗರದ ರುಕ್ಮಿಣಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಜನಶಕ್ತಿ ಮಹಿಳಾ ಸಂಘ ಅಧ್ಯಕ್ಷರು ಈಶ್ವರಿ ಹಾಗೂ ಬೇಬಿ ಮಾಧರ್ ಜಿಲ್ಲಾ ಆರೋಗ್ಯ ಇಲಾಖೆಯ ಐಸಿಟಿಸಿ ಕೌನ್ಸಿಲರ್ ಶಾಲಿನಿ ಎಚ್‍ಐವಿ/ಏಡ್ಸ್ ಸೊಂಕಿನ ಬಗ್ಗೆ ಜಾಗೃತಿ ಬಗ್ಗೆ ಮಾಹಿತಿ ನೀಡಿ, ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.

ನಿವೃತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರಿವೀಕ್ಷಕಿ ಹೇಮಲತಾ ತಾಂಡೇಲ್ ಮಾತನಾಡಿ ಎಚ್‍ಐವಿ/ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಬಂದಿದೆ. ಆದರೂ ಮೋಜು, ಮಸ್ತಿಗಾಗಿ ಮದ್ಯಪಾನ ಹಾಗೂ ಧೂಮಪಾನದಂಥ ನಶೆಯ ಪದಾರ್ಥಗಳನ್ನು ಸೇವಿಸಿಕೊಂಡು ಅಮಲಿನಲ್ಲಿದ್ದವರು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗಿ ಸೊಂಕು ತಗಲುವ ಸಾಧ್ಯತೆಗಳಿವೆ. ಎಲ್ಲರೂ ಇಂತಹ ಸೊಂಕಿನಿಂದ ದೂರವಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಬದುಕು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ)ಯ ಸಂಸ್ಥಾಪಕಿ ಗೀತಾಂಜಲಿ ಪ್ರದೀಪ ಸಾಳಸ್ಕರ್ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಅಂಗನವಾಡಿ ಶಿಕ್ಷಕಿ ಭಾರತಿ ಗೌಡ, ಜನಶಕ್ತಿ ಮಹಿಳಾ ಸಂಘದ ಕಾರ್ಯದರ್ಶಿ ಮಂಜುಳಾ ವಂದಿಸಿದರು. ಬದುಕು ಸಂಸ್ಥೆಯ ಹಾಗೂ ಜನಶಕ್ತಿ ಮಹಿಳಾ ಸಂಘದ ಎಲ್ಲ ಸಿಬ್ಬಂದಿಗಳಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.