ವಕೀಲ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಧಾನಿಗೆ ಮನವಿ ಸಲ್ಲಿಕೆ


ಕುಮಟಾ: ಬಾರ್ ಕೌನ್ಸಿಲ್ ಆಫ್ ಇಂಡಿಯಾ, ದೆಹಲಿ ಇವರು ನೀಡಿದ ಕರೆಯ ಮೇರೆಗೆ ತಾಲೂಕಿನ ವಕೀಲರ ಸಂಘದ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ, ಪ್ರೀತಿ ಗೆಹ್ಲೋಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.

ನಂತರ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್ ಹೆಗಡೆ ಮಾತನಾಡಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇದರ ಚೇರಮನ್ ಮನನ್‍ಕುಮಾರ ಮಿಶ್ರಾ ಅವರು ವಕೀಲರ ಅಭ್ಯುದಯಕ್ಕಾಗಿ ವಕೀಲರಿಗೆ ವಿಮೆ ಸೌಕರ್ಯ, ಅಭ್ಯಸಿಸಲು ವಾಚನಾಲಯದ ವ್ಯವಸ್ಥೆ, ಸುಸಜ್ಜಿತ ಕಟ್ಟಡ ಪೂರೈಸಲು ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ಸಲ್ಲಿಸುವ ಭಾರತ ದೇಶದ ಎಲ್ಲಾ ಕಕ್ಷಿದಾರರ ಹಿತಾಸಕ್ತಿ ಕಾಪಾಡಲು ಪ್ರಧಾನಮಂತ್ರಿ ಅವರಲ್ಲಿ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಆದರೆ ನರೇಂದ್ರ ಮೋದಿಯವರು ಕಾನೂನು ವಿಭಾಗದಲ್ಲಿರುವ ವಕೀಲರ ಸಮಸ್ಯೆಯ ಈಡೇರಿಕೆಗೆ ಸರಿಯಾಗಿ ಸ್ಪಂದಿಸದೇ ಇರುವುದರ ಬಗ್ಗೆ ವಕೀಲರ ಸಭೆಯಲ್ಲಿ ಚರ್ಚಿಸಿದಂತೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಜಂಟೀ ಕಮೀಟಿಯ ಪದಾಧಿಕಾರಿಗಳು ಇದನ್ನು ಖಂಡಿಸಿವೆ. ವಕೀಲರ ಬೇಡಿಕೆಯು ಕಕ್ಷಿದಾರರ ವಕೀಲರ ಹಿತ ಕಾಪಾಡಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲಿರುವುದರಿಂದ ಪ್ರಧಾನಿಯವರು ಈ ಹಿಂದೆ ನೀಡಿದ ಮನವಿಯನ್ನು ಪುರಸ್ಕರಿಸಬೇಕೆಂದು ಒತ್ತಾಯಿಸಿದರು.

ಮನವಿ ಸಲ್ಲಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎಂ ಎಸ್ ಭಟ್ಟ, ಕಾರ್ಯದರ್ಶಿ ವಸಂತ ಹುಲಸ್ವಾರ, ವೆಂಕಟೇಶ ಗೌಡ, ಹಾಗೂ ಸದಸ್ಯರಾದ ಆರ್ ಜಿ ನಾಯ್ಕ, ಆರ್ ಎ ಹೆಗಡೆ, ಶಂಕರಮೂರ್ತಿ ಶಾಸ್ತ್ರಿ, ವಿಶ್ವಾಸ ಹೆಗಡೆ, ಗಣೇಶ ರಾವ್, ಶ್ರೀನಿವಾಸ ನಾಯ್ಕ, ವೆಂಕಟೇಶ ಶಾನಭಾಗ, ಪ್ರಕಾಶ ಹೆಗಡೆ, ಡಿ ಎಚ್ ಪಟಗಾರ, ರಾಘು ನಾಯ್ಕ, ಮೀರಾ ನಾಯ್ಕ, ಸವಿತಾ ಪುಲ್ಕರ್, ಅನಿತಾ ಕಾಮತ್, ಸೀತಾರಾಮ ಹರಿಕಂತ್ರ, ಮೀನಾಕ್ಷಿ ಪಟಗಾರ, ಶ್ರೀನಿವಾಸ ನಾಯ್ಕ, ದತ್ತು ಪಟಗಾರ, ಸೀತಾರಾಮ ಗುನಗಾ ಮೊದಲಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.