ಘಮ- ಘಮ ಘೀ ರೈಸ್ ರೆಸಿಪಿ ಮಾಡಿ ಸವಿಯಿರಿ

 

ಅಡುಗೆ ಮನೆ: ಅಗತ್ಯವಾದ ಪದಾರ್ಥಗಳು: ತುಪ್ಪ – 2 ಟೀ. ಚಮಚ, ಜೀರಿಗೆ – 1 ಟೀ. ಚಮಚ, ಪಲಾವ್ ಎಲೆ – 3, ಗೋಡಂಬಿ – 3 ಟೀ. ಚಮಚ (ಕತ್ತರಿಸಿದಂತಹುದು), ಕರಿ ಬೇವು ಸೊಪ್ಪು – 4 – 5, ಹಸಿ ಬಟಾಣಿ – 1/2 ಕಪ್, ಈರುಳ್ಳಿ – 2 (ಕತ್ತರಿಸಿದಂತಹುದು), ಹಸಿ ಮೆಣಸಿನಕಾಯಿ- 3 (ಸಣ್ಣಗೆ ಕತ್ತರಿಸಿದಂತಹುದು), ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ – 1 ಟೀ. ಚಮಚ, ಖಾರದ ಪುಡಿ – 1 ಟೀ. ಚಮಚ, ಅನ್ನ – 1 1/2 ಕಪ್

ತಯಾರಿಸುವ ವಿಧಾನ: ಒಂದು ತಳ ಆಳವಿರುವ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಳ್ಳಿ. ಆ ಎಣ್ಣೆ ಬಿಸಿಯಾಗುವವರೆಗೂ ಕಾಯಿರಿ. ಇದು ಚೆನ್ನಾಗಿ ಕಾದಮೇಲೆ ಇದಕ್ಕೆ ಜೀರಿಗೆಯನ್ನು ಹಾಕಿ. ಅವು ಒಗ್ಗರಣ್ಣೆಯಂತೆ ಆದ ಮೇಲೆ ಅದಕ್ಕೆ ಪಲಾವ್ ಎಲೆ, ಗೋಡಂಬಿ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಈ ಎಲ್ಲಾ ಪದಾರ್ಥಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಬಾಣಲೆಗೆ ತಾಜಾ ಹಸಿ ಬಟಾಣಿಗಳನ್ನು ಹಾಕಿ, ಜೊತೆಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಸಹ ಹಾಕಿಕೊಳ್ಳಿ. ತದನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನವನ್ನು ಹಾಕಿ. ಈ ಪದಾರ್ಥಗಳನ್ನು ಚೆನ್ನಾಗಿ ಕಲೆಸಿಕೊಡಿ. ಇನ್ನು ಈ ಬಾಣಲೆಗೆ ಖಾರದ ಪುಡಿಯನ್ನು ಹಾಕಿ. ಚೆನ್ನಾಗಿ ಕಲೆಸಿಕೊಡಿ, ಆನಂತರ ಇದಕ್ಕೆ ಅನ್ನವನ್ನು ಹಾಕಿ. ಇನ್ನು ಬಾಣಲೆಯಲ್ಲಿರುವ ಪದಾರ್ಥಗಳ ಜೊತೆಗೆ ಚೆನ್ನಾಗಿ ಅನ್ನ ಬೆರೆಯುವ ರೀತಿಯಲ್ಲಿ ಕಲೆಸಿಕೊಡಿ, ಹಾಗೂ ಬಾಣಲೆಯಲ್ಲಿರುವ ಮಸಾಲೆಯೊಂದಿಗೆ ಬಿಳಿ ಅನ್ನ ಚೆನ್ನಾಗಿ ಬೆರೆತಿದೆಯೇ ಇಲ್ಲವೇ, ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ನಂತರ ಸವಿಯಿರಿ.

 

Categories: ಅಡುಗೆ ಮನೆ

Leave A Reply

Your email address will not be published.