ಆಕಸ್ಮಿಕ ಬಾವಿಗೆ ಬಿದ್ದ ಚಿರತೆ: ರಕ್ಷಿಸಿದ ‌‌ಅರಣ್ಯ ಇಲಾಖೆ‌‌ ಸಿಬ್ಬಂದಿಗಳು

ಶಿರಸಿ: ತಾಲೂಕಿನ ಹಿತ್ಲತೋಟ ಗ್ರಾಮದಲ್ಲಿ ಆಹಾರ ಅರಸಿಕೊಂಡು ಬಂದು ಆಕಸ್ಮಿಕವಾಗಿ ಬಾವಿಗೆ ಬಿದ್ದ ಚಿರತೆಯೊಂದನ್ನು ‌‌ಅರಣ್ಯ ಇಲಾಖೆ‌‌ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

ಶಿರಸಿ ಅರಣ್ಯ ವಲಯದ ಕೊಪ್ಪ ಶಾಖೆಯ ಹಿತ್ಲತೋಟ ಗ್ರಾಮದ ವೆಂಕಟರಮಣ ಹೆಗಡೆ ಎನ್ನವವರ ಮನೆಗೆ ಸೋಮವಾರ ಬೆಳಗಿನ ಜಾವ 2 ಗಂಟೆಗೆ ನಾಯಿ ಹಿಡಿಯಲು ಬಂದು ತೆರೆದ ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಣೆ ಮಾಡಲಾಗಿದೆ.

ಬಾವಿಗೆ ಬಿದ್ದ ಶಬ್ದ ಕೇಳಿ ನೋಡಿದಾಗ ಚಿರತೆ ಬಿದ್ದಿರುವ ದೃಶ್ಯ ಮನೆಯವರಿಗೆ ಕಂಡು ಬಂದಿತ್ತು. ತಕ್ಷಣವೇ ಅರಣ್ಯ ಇಲಾಖೆಯವರಿಗೆ ಮನೆಯವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಏಣಿ ಮೂಲಕ ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ. ಮೇಲೆ‌ ಬಂದ ತಕ್ಷಣ ‌ಚಿರತೆ ಅರಣ್ಯದ ಕಡೆ ಓಡಿ ಹೋಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.