ಮಂಜುಗುಣಿಯಲ್ಲಿ ಫೆ.14ಕ್ಕೆ ಶ್ರೀ ಸತ್ಯನಾರಾಯಣ ಸೇವಾ ವೃತ

ಶಿರಸಿ: ಕರ್ನಾಟಕ ತಿರುಪತಿ ಖ್ಯಾತಿಯ ತಾಲೂಕಿನ ಮಂಜುಗುಣಿ ಶ್ರೀ ವೆಂಕಟರಮಣ ದೇವಾಲಯ ಆಯೋಜನೆಯಲ್ಲಿ ವೆಂಕಟೇಶ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸೇವಾ ವೃತ ಕಥಾ ಪೂಜಾ ಕಾರ್ಯಕ್ರಮ ಫೆ.14ರಂದು ನಡೆಯಲಿದೆ.

`ಅನಂತಾ ವಿಷ್ಣು ಸನ್ನಿಧೌ’ ಎಂಬಂತೆ ವಿಷ್ಣು ಸಾನ್ನಿಧ್ಯದಲ್ಲಿ ಮಾಡುವ ಸೇವೆಗೆ ಅನಂತ ಫಲವೆಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸ್ತ್ರದ ಆದೇಶದಂತೆ ಲೋಕ ಕಲ್ಯಾಣಾರ್ಥವಾದ ಸೇವಾ ಕಾರ್ಯ ಪ್ರಾಚೀನವೂ, ಪವಿತ್ರವೂ, ಪುಣ್ಯತಮವೂ ಆದ ಶ್ರೀ ಕ್ಷೇತ್ರದ ವಿಷ್ಣು ಸನ್ನಿಧಿಯಲ್ಲಿ ಸದ್ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಲಂಬಿ ಸಂವತ್ಸರದ ಮಾಘ ಶುಕ್ಲ ನವಮಿಯ ಗುರುವಾರ ಹಮ್ಮಿಕೊಳ್ಳಲಾದ ಸತ್ಯನಾರಾಯಣ ಕಥೆ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಸತ್ಯನಾರಾಯಣ ವೃತವೊಂದರ ಪೂಜಾ ಶುಲ್ಕ 325ರು ನಿಗಧಿಪಡಿಸಲಾಗಿದೆ. ಅಂದು ಮುಂಜಾನೆ 10 ಗಂಟೆಯೊಳಗೆ ಸೇವಾಕರ್ತ ದೇವಾಲಯದಲ್ಲಿ ಉಪಸ್ಥಿರಿರಬೇಕು. ವೃತ ಪ್ರಾರಂಭದಲ್ಲಿ ಸೇವಾಕರ್ತನ ಹೆಸರು, ರಾಶಿ, ನಕ್ಷತ್ರ, ಗೋತ್ರದೊಂದಿಗೆ ಸಂಕಲ್ಪ ಮಾಡಲಾಗುತ್ತದೆ. ಸಪಾದ ನೈವೇದ್ಯ, ಮಂಗಳಾರತಿ, ಸತ್ಯನಾರಾಯಣ ಪೂಜಾಂಗ ಮಹಾಮಂಗಳಾರತಿ, ತೀರ್ಥ ಪ್ರೋಕ್ಷಣ್ಯ, ವೈದಿಕ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿದೆ. ದೇವರ ಸೇವಾ ಕಾರ್ಯದಲ್ಲಿ ಭಾಗಿಯಾಗಲಿಚ್ಛಿಸುವವರು ದೇವಸ್ಥಾನದ ಕಾರ್ಯಾಲಯವನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ 08283-246079 ಸಂಪರ್ಕಿಸಬಹುದು

Categories: ಜಿಲ್ಲಾ ಸುದ್ದಿ

Leave A Reply

Your email address will not be published.